ಗರ್ಭಿಣಿಯರಿಗೆ ಬುತ್ತಿ ಭಾಗ್ಯದ ಅಭಿಯಾನ

9 LXR-4
ಲಕ್ಷ್ಮೇಶ್ವರ ಸಮೀಪದ ಹರ್ಲಾಪುರ ಗ್ರಾಮದಲ್ಲಿ ಹರಿಹರದ ಶ್ರೀ ಮಹಾತಪಸ್ವಿ ಸೇವಾ ಪ್ರತಿಷ್ಠಾನದ ಶಾಖೆಯಿಂದ ‘ಬಯಕೆ ತುಂಬಿದ ಗರ್ಭಕ್ಕೆ ಭಾಗ್ಯದ ಬುತ್ತಿ’ ಅಭಿಯಾನ ನಡೆಯಿತು.
Published on

ಲಕ್ಷ್ಮೇಶ್ವರ: ಹರಿಹರದ ಶ್ರೀ ಮಹಾತಪಸ್ವಿ ಸೇವಾ ಪ್ರತಿಷ್ಠಾನದ ಲಕ್ಷ್ಮೇಶ್ವರ ಉಪಶಾಖೆ ವತಿಯಿಂದ ಸಮೀಪದ ಹರ್ಲಾಪುರ ಗ್ರಾಮದಲ್ಲಿ ‘ಬಯಕೆ ತುಂಬಿದ ಗರ್ಭಕ್ಕೆ ಭಾಗ್ಯದ ಬುತ್ತಿ’ ವಿಶೇಷ ಅಭಿಯಾನವನ್ನು ಮಂಗಳವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಅಭಿಯಾನದ ಮೂಲಕ ಬಡಕುಟುಂಬದ ಗರ್ಭಿಣಿಯರಿಗೆ ಉಚಿತವಾಗಿ ಅಕ್ಕಿ, ಬೆಲ್ಲ, ಗೋಧಿ ಹಿಟ್ಟು, ಕಡಲೆ ಹಿಟ್ಟು, ಸಕ್ಕರೆ, ಕಡಲೆ, ರವಾ ಸೇರಿದಂತೆ ಸುಮಾರು 25 ವಸ್ತುಗಳನ್ನು ಒಳಗೊಂಡ ರೇಷನ್ ಕಿಟ್‌ಗಳನ್ನು ನೀಡುವ ಮೂಲಕ ಬಯಕೆಯನ್ನು ಪೂರೈಸುವ ಸೇವಾ ಕಾರ್ಯಕ್ರಮ ಇದಾಗಿದೆ.

ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಶ್ರೀ ಅವಧೂತ ಕವಿ ಗುರುರಾಜ ಗುರೂಜಿ ಅವರ ಮಾರ್ಗದರ್ಶನದಲ್ಲಿ ಅನೇಕ ಕಾರ್ಯಕ್ರಮಗಳು ಸಮಾಜಕ್ಕೆ ಹೊಸತನ ನೀಡುವುದರ ಜತೆಗೆ ಉತ್ತಮ ಸಂದೇಶ ನೀಡುತ್ತಿದೆ. ಕಾರ್ಯಕ್ರಮದಲ್ಲಿ 25 ಗರ್ಭಿಣಿಯರಿಗೆ ಕಿಟ್‌ಗಳನ್ನು ನೀಡಲಾಯಿತು. ಗರ್ಭಿಣಿಯರಿಗೆ ಗೌರವಪೂರ್ವಕವಾಗಿ ಅರಿಶಿಣ- ಕುಂಕುಮ, ಹೂವು ನೀಡಿ ಉಡಿ ತುಂಬಲಾಯಿತು.

ಪ್ರತಿಷ್ಠಾನದ ಲಕ್ಷ್ಮೇಶ್ವರ ಶಾಖೆಯ ಮೇಲ್ವಿಚಾರಕರಾದ ಲತಾ ಹಿರೇಮಠ, ಸಂಗೀತಾ ಧರ್ಮಾಯತ, ಮುಖ್ಯಸ್ಥರಾದ ವೀರೇಶ್ವರಯ್ಯ ಹಿರೇಮಠ, ನಿರ್ದೇಶಕರಾದ ರಾಜು ಫಕೀರಸ್ವಾಮಿಮಠ, ಕಿಶೋರ ಜಾಧವ, ಮೋಹನ್ ಗುಬ್ಬಣ್ಣವರ್, ಸದಸ್ಯರಾದ ವಿಜಯ ಹೊಳ್ಳಮಠ, ವೀರೇಶ ಹಳಮನಿ, ಮಂಜುಳಾ ಮುಳಗುಂದ, ಚನ್ನವೀರಮ್ಮ ಹಿರೇಮಠ, ಮಧು ಬಣಗಾರ, ಸಿದ್ಧಲಿಂಗೇಶ ಭಾವಿಕಟ್ಟಿ ಹಾಗೂ ಹರ್ಲಾಪುರ ಗ್ರಾಪಂ ಅಧ್ಯಕ್ಷ ಬಸವರಾಜ ಬಟ್ಟೂರ, ಉಪಾಧ್ಯಕ್ಷೆ ಪವಿತ್ರಾ ಕವದಿಮಠ, ಮಾಜಿ ಅಧ್ಯಕ್ಷ ರಾಮಪ್ಪ ಪೂಜಾರ, ಆಶಾ ಕಾರ್ಯಕರ್ತರಾದ ಪ್ರೇಮಾ ಕಾಲಡಗಿ, ನೀಲಮ್ಮ ಅತ್ತಿಗೇರಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net