

ರಾಣೆಬೆನ್ನೂರ: ಮಜ್ಜಿಗೆ ಕಡಿಯುವ ಮಷಿನ್ನಿಂದ ವಿದ್ಯುತ್ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟ ಟನೆ ತಾಲೂಕಿನ ಮಾಳನಾಯಕನಹಳ್ಳಿಯಲ್ಲಿ ಸೋಮವಾರ ಸಂಭವಿಸಿದೆ.
ಹನುಮಂತಪ್ಪ ಕರಬಸಪ್ಪ ರಡ್ಡೇರ (40) ಮೃತ ವ್ಯಕ್ತಿ.
ಇವರು ಮನೆಯಲ್ಲಿ ಮಜ್ಜಿಗೆ ಕಡಿಯುವ ಸಲುವಾಗಿ ಮಷಿನ್ ಆನ್ ಮಾಡಲು ಹೋದಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.