ಜೀವವೈವಿಧ್ಯ ಸಂರಸಲು ಕೆರೆ ಅಂಗಳದಲ್ಲಿ ಚಿಟ್ಟೆ ಪಾರ್ಕ್​

Untitled-1
ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಿಂದ ಅಭಿವೃದ್ಧಿಪಡಿಸಲಾದ ಚಿಟ್ಟೆಪಾರ್ಕ್​ ಅನ್ನು ಶಾಸಕ ಧೀರಜ್​ ಮುನಿರಾಜು ಉದ್ಘಾಟಿಸಿದರು. ಮುಖಂಡರಾದ ಕೃಷ್ಣಪ್ಪ, ಪ್ರೇಮ್​ ಕುಮಾರ್​, ಮುನಿರಾಜಪ್ಪ, ಮುನಿನಾರಾಯಣಸ್ವಾಮಿ, ಮುನಿಚಂದ್ರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನರಸಿಂಹಮೂರ್ತಿ, ಉಮಾಶಂಕರ್​, ಆರೋಗ್ಯ ನಿರೀಕ್ಷಕಿ ಕೀರ್ತಿಲೇಖಾ, ಪೌರಕಾರ್ಮಿಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಶಾಲಾ ಶಿಕ್ಷಕರು, ಮಕ್ಕಳಿದ್ದರು.
Published on

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ವತಿಯಿಂದ ಜೀವವೈವಿಧ್ಯ ಸಂರಸಲು ಕೆರೆ ಅಂಗಳದಲ್ಲಿ ಅಭಿವೃದ್ಧಿಪಡಿಸಿರುವ ಚಿಟ್ಟೆ ಪಾರ್ಕ್​ ಅನ್ನು ಶಾಸಕ ಧೀರಜ್​ ಮುನಿರಾಜು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಶಾಸಕರು, ಈ ಬಾರಿಯ ವಿಶ್ವ ಪರಿಸರ ದಿನಾಚರಣೆ ವಿಶೇಷವಾಗಿದೆ. ಈ ವರ್ಷ ತಾಲೂಕಿನ ಕೆಸ್ತೂರು ಗ್ರಾಮ ಪಂಚಾಯತಿಯಿಂದ ಹುಲಿಕುಂಟೆ ಟೋಲ್​ನ 10 ಕಿ.ಮೀಗಳ ಉದ್ದದವರೆಗೂ ಅರಣ್ಯ ಇಲಾಖೆ ವತಿಯಿಂದ ವಿವಿಧ ರೀತಿಯ ಸಸಿಗಳನ್ನು ನೆಡಲಾಗಿದೆ. ಶಾಲಾ ಮಕ್ಕಳು ವೇಷಭೂಷಣಗಳೊಂದಿಗೆ ಪರಿಸರ ಸಂರಕ್ಷಣೆ ಕುರಿತಂತೆ ವಿಶೇಷವಾಗಿ ಜಾಗೃತಿ ಮೂಡಿಸಲು ಮುಂದಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ , ಗಿಡ ಮರ ಸಸಿಗಳನ್ನು ರಕ್ಷಣೆ ಮಾಡುವ ಮೂಲಕ ಪ್ರತಿನಿತ್ಯವೂ ಆಚರಿಸುವಂತಾಗಲಿ ಎಂದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನರಸಿಂಹಮೂರ್ತಿ ಮಾತನಾಡಿ, ಕೆರೆಯಂಗಳದಲ್ಲಿ ಕಾರ್ಖಾನೆಗಳ ಸಹಭಾಗಿತ್ವದಲ್ಲಿ ವಿಶೇಷ ಸಸಿಗಳನ್ನು ನಡೆಯುವ ಮೂಲಕ ಜೀವವೈವಿಧ್ಯ ರಕ್ಷಣೆಗೆ ಮುಂದಾಗಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡುವ ಮೂಲಕ ಕಣ್ಮನ ಸೆಳೆಯುವಂತೆ

ಮಾಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net