ಕೃಷಿಕರು ಬೆಳೆ ವೈವಿಧ್ಯತೆ ರೂಢಿಸಿಕೊಳ್ಳಬೇಕು

butter fruit
Published on

ಮಡಿಕೇರಿ:

ಕೃಷಿಕರು ಏಕಬೆಳೆ ಬದಲು ಬಹು ವಿಧದ ಬೆಳೆಗಳನ್ನು ಬೆಳೆಯುವ ಮೂಲಕ ಆದಾಯದ ಮೂಲಗಳನ್ನು ಕಂಡುಕೊಳ್ಳಬೇಕು ಎಂದು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ ಎಂ.ಆರ್. ದಿನೇಶ್ ಹೇಳಿದರು. ಭಾರತೀಯ ಕೃಷಿ ಅನುಸಂಧಾನ ಪರಿಷತ್, ಕೇಂದ್ರೀಯ ತೋಟಗಾರಿಕಾ ಸಂಸ್ಥೆ, ಹಾಗೂ ಅಧಿಕ ಮೌಲ್ಯದ ವಿದೇಶಿ ತೋಟಗಾರಿಕೆ ಬೆಳೆಗಳ ಅಭಿವೃದ್ಧಿ ಸಂಘದ ವತಿಯಿಂದ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಪ್ರಾಯೋಗಿಕ ಕೇಂದ್ರದಲ್ಲಿ ಭಾನುವಾರ ಅಯೋಜಿಸಿದ್ದ ಬೆಣ್ಣೆ ಹಣ್ಣಿನ ವೈವಿಧ್ಯತೆ ಮೇಳ, ಕ್ಷೇತ್ರೋತ್ಸವ ಹಾಗೂ ಪಾಲುದಾರರ ಸಭೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಕೊಡಗಿನಲ್ಲಿ ಹಲವು ವರ್ಷಗಳಿಂದಲೇ ಬೆಣ್ಣೆ ಹಣ್ಣು ಬೆಳೆಸಲಾಗುತ್ತಿದೆ. ಇದೇ ರೀತಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಆದಾಯದ ಮೂಲಗಳನ್ನು ಕಂಡುಕೊಳ್ಳಬೇಕು. ತೋಟಗಾರಿಕಾ ಸಂಶೋಧನಾ ಕೇಂದ್ರದಿAದ ಬೆಣ್ಣೆಹಣ್ಣಿನ ಸಂಶೋಧಿತ ತಳಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ನಿರ್ದೇಶಕÀ ಡಾ. ಪ್ರಕಾಶ್ ಪಾಟೀಲ್ ಮಾತನಾಡಿ ಆದಾಯದ ಮೂಲವಾಗಿ ಒಂದೇ ಬೆಳೆಯನ್ನು ಅವಲಂಬಿಸುವ ಬದಲು ವಿವಿಧ ಬೆಳೆಗಳನ್ನು ಮಾಡುವ ಮೂಲಕ ಹೆಚ್ಚಿನ ಆದಾಯದ ಮೂಲಗಳನ್ನು ಕಂಡುಕೊಳ್ಳಬೇಕು. ಕೊಡಗಿನ ವಾತಾವರಣವೂ ಬೆಣ್ಣೆಹಣ್ಣಿನ ಬೇಸಾಯಕ್ಕೆ ಉತ್ತಮವಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಪೊನ್ನಂಪೇಟೆಯ ಸಿಇಟಿ ಕಾಲೇಜು ನಿರ್ದೇಶಕರೂ ಆದ ಪ್ರಗತಿಪರ ಬೆಳೆಗಾರ ಕುಪ್ಪಂಡ ಎ. ಚಿಣ್ಣಪ್ಪ ಮಾತನಾಡಿ, ಕೊಡಗಿನವರು ಕಾಫಿ ಮತ್ತು ಕರಿಮೆಣಸು ಬೆಳೆಯನ್ನು ಆದಾಯದ ಮೂಲವಾಗಿ ರೂಪಿಸಿಕೊಂಡಿದ್ದರು. ಆದರೆ ಕೊಡಗಿನ ಕಿತ್ತಳೆಗೆ ಹೆಚ್ಚಿನ ಒತ್ತು ನೀಡಿದ್ದರೆ ಕಿತ್ತಳೆ ಬೆಳೆಯನ್ನು ಅಭಿವೃದ್ಧಿಪಡಿಸಬಹುದಿತ್ತು. ಇಂಥ ವೈವಿಧ್ಯತಾ ಮೇಳಗಳು ಕ್ರಷಿಕರಿಗೆ ಪ್ರಯೋಜನಕಾರಿ ಆಗಲಿದೆ ಎಂದರು.

ಐಹೆಚ್‌ಆರ್ ಗೀತೆಯೊಂದಿಗೆ ಪ್ರಾರಂಭಗೊAಡ ಕಾರ್ಯಕ್ರಮದಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹಣ್ಣು ವಿಭಾಗದ ಮುಖ್ಯಸ್ಥ ಡಾ. ಎಂ. ಶಂಕರ್, ಕೇಂದ್ರದ ಮುಖ್ಯಸ್ಥ ಡಾ. ಮುರಳೀಧರ್ ಇದ್ದರು. ಇದೇ ವೇಳೆ ಬೆಣ್ಣೆ ಹಣ್ಣಿನ ಬೇಸಾಯ ಕ್ರಮದ ಬಗ್ಗೆ ಕೈಪಿಡಿ ಬಿಡುಗಡೆ ಮಾಡಲಾಯಿತು. ಡಾ. ಎಂ.ಆರ್. ದಿನೇಶ್ ಮತ್ತು ಕೆ.ಎ.ಚಿಣ್ಣಪ್ಪ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net