ಶ್ರೀ ರಂಗನಾಥಸ್ವಾಮಿಗೆ ಬೆಣ್ಣೆ ಅಲಂಕಾರ ಪೂಜೆ

IMG-20240630-WA0006
Published on

ಅರಸೀಕೆರೆ ಗ್ರಾಮಾಂತರ: ಗುತ್ತಿನಕೆರೆ ಶ್ರೀ ರಂಗನಾಥಸ್ವಾಮಿಗೆ ಭಾನುವಾರ ಬೆಣ್ಣೆ ಅಲಂಕಾರ ವಿಶೇಷ ಪೂಜೆ ನೆರವೇರಿಸಲಾಯಿತು.


ಆರಾಧ್ಯ ದೈವ ಗುತ್ತಿನಕೆರೆ ರಂಗನಾಥ ಸ್ವಾಮಿಗೆ ಬೆಣ್ಣೆ ಹಾಗೂ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿಸಿ ಪೂಜೆ ಸಲ್ಲಿಸುವ ಮೂಲಕ ಭಕ್ತರೊಬ್ಬರು ಹರಕೆ ಅರ್ಪಿಸಿದರು.


ಜ್ಯೇಷ್ಠ ಮಾಸದ ನವಮಿ, ರೇವತಿ ನಕ್ಷತ್ರದ ಜತೆಗೆ ಭಾನುವಾರ ರಜಾ ದಿನವಾಗಿದ್ದರಿಂದ ನೂರಾರು ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸಿದ ಭಕ್ತರು ಸರದಿ ಸಾಲಿನಲ್ಲಿ ನಿಂತು ರಂಗನಾಥಸ್ವಾಮಿ ದರ್ಶನ ಮಾಡಿ, ತೀರ್ಥ ಪ್ರಸಾದ ಪಡೆದು ಪುನೀತರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net