ಕಸಾಪ ಚಟುವಟಿಕೆಗಳು ವಿಸ್ತಾರವಾಗಲಿ

17 GVT 02
ಗಂಗಾವತಿ ಕಸಾಪಭವನದಲ್ಲಿ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಮತ್ತು ಕವಿಗೋಷ್ಠಿಯನ್ನು ರಾಜ ವಂಶಸ್ಥೆ ಲಲಿತಾರಾಣಿರಾಯಲು ಉದ್ಘಾಟಿಸಿದರು. ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ ಇತರರಿದ್ದರು.
Published on

ಗಂಗಾವತಿ: ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ವೇದಿಕೆ ಅಗತ್ಯವಿದ್ದು, ಕಸಾಪಭವನ ಉತ್ತಮ ರೀತಿಯಲ್ಲಿ ನಿರ್ವಹಿಸಬೇಕಿದೆ ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ್ ಹೇಳಿದರು.

ನಗರದ ಕಸಾಪಭವನದಲ್ಲಿ ಕಸಾಪ ತಾಲೂಕು ಘಟಕ, ಶ್ರೀ ಚನ್ನಬಸವ ಪ್ರಕಾಶನ, ಕಾವ್ಯಲೋಕ, ಹೊಸಳ್ಳಿಯ ವಿಶ್ವರತ್ನ ಗ್ರಾಮೀಣಾಭಿವದ್ಧಿ ಸಂಸ್ಥೆ ಸಹಯೋಗದೊಂದಿಗೆ ಭಾನುವಾರ ಹಮ್ಮಿಕೊಂಡಿದ್ದ ಸಾಧಕರ ಸನ್ಮಾನ ಮತ್ತು ಕವಿಗೋಷ್ಠಿಯಲ್ಲಿ ಮಾತನಾಡಿದರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ವಿಸ್ತಾರಕ್ಕೆ ಸಂಘಟನೆಗಳಿದ್ದರೂ, ಭವನದ ಕೊರತೆಯಿಂದ ಸಾಕಾರಗೊಳ್ಳುತ್ತಿಲ್ಲ. ಕಸಾಪ ಭವನ ಸ್ವಚ್ಛವಾಗಿಡಲು ಪರಿಷತ್ ಸದಸ್ಯರು ಗಮನಹರಿಸಬೇಕೆಂದರು.

ರಾಜವಂಶಸ್ಥೆ ಲಲಿತಾರಾಣಿರಾಯಲು ಮಾತನಾಡಿ, ಸಾಹಿತ್ಯ, ಕಲೆ ಕಾರ್ಯಕ್ರಮ ಆಯೋಜನೆಗೆ ಸಂಘಟನೆಗಳು ಮುಂದಾಗಬೇಕಿದ್ದು, ಸಾರ್ವಜನಿಕರ ಸಹಕಾರ ಮುಖ್ಯ ಎಂದರು.

ತುಂಗಭದ್ರಾ ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ ಮಾತನಾಡಿ, ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಕವಿಗೋಷ್ಠಿಯಲ್ಲಿ ಶಾಮೀದ್ ಲಾಠಿ, ಶಶಿಕಲಾ ಕುರುಗೋಡು, ಚಿದಾನಂದ ಕೀರ್ತಿ, ಭೀಮನಗೌಡ ಕೇಸರಹಟ್ಟಿ, ಜಯಶ್ರೀ ಹಕ್ಕಂಡಿ ಇತರರು ಕವನ ವಾಚಿಸಿದರು.

ನಿವೃತ್ತ ಪ್ರಾಚಾರ್ಯ ಡಾ.ಬಸವರಾಜ ಐಗೋಳ, ಚಾರಣ ಬಳಗದ ಸಂಚಾಲಕ ಡಾ.ಶಿವಕುಮಾರ ಮಾಲಿ ಪಾಟೀಲ್, ಕಸಾಪ ತಾಲೂಕು ಅಧಕ್ಷ ರುದ್ರೇಶ ಆರಾಳ್, ಕಾವ್ಯಲೋಕ ಅಧ್ಯಕ್ಷ ಎಂ.ಪರಶುರಾಂಪ್ರಿಯ, ಸಂಸ್ಥೆ ಅಧ್ಯಕ್ಷ ರಗಡಪ್ಪ ಹೊಸಳ್ಳಿ, ವಿವಿಧ ಸಂಘಟನೆ ಪದಾಧಿಕಾರಿಗಳಾದ ರೇವಣಸಿದ್ದಯ್ಯ ಸ್ವಾಮಿ, ಪಿ.ಎಂ.ಸುಬ್ರಮಣ್ಯಂ, ಗುರುರಾಜ್ ಬೆಳ್ಳುಬ್ಬಿ, ಕೃಷ್ಣ ಆಶೀಶ್ ಇತರರಿದ್ದರು. ಶಿಕ್ಷಕರಾದ ಸುಂಕಪ್ಪ, ಜಯಶ್ರೀ ಹಕ್ಕಂಡಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net