

ಬೆಳಗಾವಿ: ವಿದ್ಯಾರ್ಥಿಗಳ ಶೈಕ್ಷಣಿಕ ಹಿತದಷ್ಠಿಯಿಂದ ಹೊಸದಾಗಿ ಶಾಲಾ ಕಾಲೇಜು ಪ್ರವೇಶಾತಿ ಪಡೆದ 1 ರಿಂದ 12 ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಜು.10ರವರೆಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳಿಗೆ ನೀಡಲಾದ ಸೌಲಭ್ಯವನ್ನು ಸದುಪಯೋಗ ಪಡೆಸಿಕೊಳ್ಳುವುದರೊಂದಿಗೆ ನೀಡಲಾದ ಕಾಲಾವಧಿಯಲ್ಲಿ ಸಂಸ್ಥೆಯ ಬಸ್ ಪಾಸ್ ಪಡೆಯಬಹುದಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.