ದೇವರಿಗಿದೆ ಸಿರಿಸಂಪತ್ತು ಕೊಡುವ ಶಕ್ತಿ

Untitled design (24)
ಮರಿಯಮ್ಮನಹಳ್ಳಿಯಲ್ಲಿ ಜೋಡಿ ರಥಗಳ ನಿರ್ಮಾಣ ಕಾಮಗಾರಿಗೆ ದೇಣಿಗೆ ನೀಡಿದ ದಾನಿಗಳಾದ ಶಾಮರಾಜ್ ಸಿಂಗ್ ಹಾಗೂ ಜಯರಾಜ್ ಸಿಂಗ್ ಅವರನ್ನು ಸನ್ಮಾನಿಸಲಾಯಿತು. ಶಾಸಕ ಕೆ.ನೇಮಿರಾಜ್ ನಾಯ್ಕ, ಸಮಿತಿಯ ಸದಸ್ಯರಾದ ಚಿದ್ರಿ ಸತೀಶ್, ಸದಸ್ಯ ಕಾರ್ಯದರ್ಶಿ ಹಾಗೂ ಉಪತಹಸೀಲ್ದಾರ್ ನಾಗರಾಜ ಎಚ್., ದೇವಸ್ಥಾನ ಸಮಿತಿ ಸದಸ್ಯರಾದ ಗೋವಿಂದರ ಪರಶುರಾಮ, ದೊಡ್ಡ ರಾಮಣ್ಣ, ಪ್ರಕಾಶ ನಾಯ್ಕ, ಮಜ್ಗಿ ಶಿವಪ್ಪ ಇನ್ನಿತರರಿದ್ದರು.
Published on

ಮರಿಯಮ್ಮನಹಳ್ಳಿ: ಪಟ್ಟಣದ ಆಂಜನೇಯ ಸ್ವಾಮಿ ಹಾಗೂ ಲಕ್ಷ್ಮೀ ನಾರಾಯಣಸ್ವಾಮಿ ಜೋಡಿ ರಥಗಳ ನಿರ್ಮಾಣಕ್ಕೆ ಉದ್ಯಮಿ ಜಯರಾಜ್ ಸಿಂಗ್ 50 ಲಕ್ಷ ರೂ., ಎಸ್.ಎಲ್.ಆರ್. ಮೆಟಾಲಿಕ್ಸ್ ಕಂಪನಿ 20 ಲಕ್ಷ ರೂ. ಹಾಗೂ ಹೊಸಪೇಟೆಯ ಮಂಜುನಾಥ 10 ಲಕ್ಷ ರೂ. ದೇಣಿಗೆ ನೀಡಿದ ದಾನಿಗಳಿಗೆ ದೇವಸ್ಥಾನ ಅಭಿವೃದ್ಧಿ ಸಮಿತಿ ಗುರುವಾರ ಸನ್ಮಾನಿಸಿತು.

ದೇವಸ್ಥಾನ ಅಭಿವೃದ್ಧಿ ಸಮಿತಿಯಿಂದ ದಾನಿಗಳಿಗೆ ಸನ್ಮಾನ

ಉದ್ಯಮಿ ಶಾಮರಾಜ್ ಸಿಂಗ್ ಮಾತನಾಡಿ, ಮನುಜರು ದೇವರಲ್ಲಿ ಬೇಡಲು ಬರುವವರು. ನಮಗೆಲ್ಲ ಸಿರಿಸಂಪತ್ತನ್ನು ಕೊಡುವ ಶಕ್ತಿ ದೇವರಿಗಿದೆ. ಆತನ ಆಜ್ಞೆಯಂತೆ ಅಳಿಲು ಸೇವೆ ಸಲ್ಲಿಸಲಾಗಿದೆ. ನಾವು ದಾನಿಗಳಲ್ಲ. ದೇವರ ಆಜ್ಞಾನುಸಾರಿಗಳು ಎಂದರು.
ದಾನಿ ಜಯರಾಜ್ ಸಿಂಗ್ ಮಾತನಾಡಿ, ನೂತನ ಜೋಡಿ ರಥಗಳ ಸಿದ್ಧತೆಗೆ ದೇವರ ಕೃಪೆಯಿಂದ ಸೇವೆ ಸಲ್ಲಿಸಲಾಗಿದೆ. ಈ ಪುಣ್ಯದ ಕೆಲಸಕ್ಕೆ ಎಲ್ಲರೂ ಕೈ ಜೋಡಿಸೋಣ ಎಂದರು.

ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ಕೆ.ನೇಮಿರಾಜ್ ನಾಯ್ಕ ಮಾತನಾಡಿ, ಲಕ್ಷ್ಮೀ ನಾರಾಯಣ ಸ್ವಾಮಿ ಹಾಗೂ ಆಂಜನೇಯಸ್ವಾಮಿ ಉಭಯ ದೇವರುಗಳ ಮೂಲ ದೇವಸ್ಥಾನವು ತುಂಗಭದ್ರಾ ಆಣೆಕಟ್ಟು ಹಿನ್ನೀರಿನಲ್ಲಿ ಮುಳುಗಡೆಯಾದ ಮಲ್ಲಾಪುರ ತಾಲೂಕಿನ ನಾರಾಯಣದೇವರ ಕೆರೆ ಆಗಿತ್ತು. ನಂತರ ದೇವರುಗಳ ಮೂರ್ತಿಗಳನ್ನು ಜೋಡಿ ರಥಗಳನ್ನು ಮರಿಯಮ್ಮನಹಳ್ಳಿಗೆ ಸ್ಥಳಾಂತರಗೊಳಿಸಲಾಯಿತು. ದಾನಿಗಳ ಸಹಕಾರದಿಂದ ಉನ್ನತ ಕಾರ್ಯವಾಗುತ್ತಿರುವುದು ಸಂತಸ ತರಿಸಿದೆ ಎಂದರು.

ಪ್ರಾಸ್ತಾವಿಕವಾಗಿ ಸಮಿತಿಯ ಸದಸ್ಯರಾದ ಚಿದ್ರಿ ಸತೀಶ್ ಮಾತನಾಡಿದರು. ಸಮಿತಿ ಸದಸ್ಯರಾದ ಈ.ಯರ‌್ರಿಸ್ವಾಮಿ, ಸಣ್ಣ ದುರುಗಪ್ಪ, ನಾಗೇಶ್ ವಿ.ಎನ್., ಡಿ.ನರಸಿಂಹ ಮೂರ್ತಿ, ಸಜ್ಜೇದ್ ವಿಶ್ವನಾಥ, ಕೆ.ರಘವೀರ್, ಬಿ.ರುದ್ರಮುನಿ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net