ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಮಿಷನರ್ ಸೂಚನೆಯಂತೆ ವಿಶೇಷ ತಂಡಗಳು ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆಗೆ ಇಳಿದಿದ್ದು, ಕಾರ್ಯಪ್ರವೃತ್ತವಾಗಿದೆ. ವಿವಿಧ ಹೊಟೇಲು, ಲಾಡ್ಜ್, ಪ್ರಮುಖವಾಗಿ ಟೋಲ್‌ಗೇಟ್ ಸಿಸಿ ಕೆಮರಾಗಳ ಪರಿಶೀಲನೆಯಲ್ಲಿ ಪೊಲೀಸರು ತೊಡಗಿಕೊಂಡಿದ್ದು, ಪ್ರಕರಣ ಕ್ಷಿಪ್ರವಾಗಿ ಭೇದಿಸುವ ವಿಶ್ವಾಸವನ್ನು ಮಂಗಳೂರು ನಗರದ ಪೊಲೀಸ್ ಕಮಿಷನರ್ ಸು˜ರ್ ಕುಮಾರ್ ರೆಡ್ಡಿ ವ್ಯಕ್ತಪಡಿಸಿದ್ದಾರೆ.