ಉದ್ಯಮಿ ನೀರೆಬೈಲೂರು ಗೋವಿಂದ ನಾಯಕ್​ ನಿಧನ

udp-19-govind nayak
Published on

ಉಡುಪಿ: ಗೀತಾಂಜಲಿ ಉದ್ಯಮ ಸಂಸ್ಥೆಗಳ ಪ್ರವರ್ತಕ ಹಾಗೂ ಆರ್​ ಕೆ ಗ್ರೂಪ್​ ಹಿರಿಯರಾದ ನೀರೆಬೈಲೂರು ಗೋವಿಂದ ನಾಯಕ್​ (89) ಭಾನುವಾರ ಮುಂಜಾನೆ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಐವರು ಪುತ್ರರು ಹಾಗೂ ಪುತ್ರಿ, ಸೊಸೆಯಂದಿರು, ಅಳಿಯ ಹಾಗೂ ಮೊಮ್ಮಕ್ಕಳು ಸಹಿತ ಅಪಾರ ಬಂಧುಬಳಗ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ. ಹೆಸರಾಂತ ಜವಳಿ ಮಳಿಗೆ ಗೀತಾಂಜಲಿ ಸಿಲ್ಕ್​ ಮತ್ತು "ಶಾಂತಿಸಾಗರ್​" ಹೊಟೇಲ್​ನ ಸಂಸ್ಥಾಪಕರಾಗಿದ್ದ ಇವರು, ಕೃಷಿಕರಾಗಿ - ಅಧ್ಯಾತ್ಮಿಕ ಜೀವನವನ್ನು ನಡೆಸುತ್ತಿದ್ದರು.

ಸಂಸ್ಥಾಪಕರ ನಿಧನ ಹಿನ್ನೆಲೆಯಲ್ಲಿ ಉಡುಪಿಯ ಗೀತಾಂಜಲಿ ಸಿಲ್ಕ್​, ನ್ಯೂ ಶಾಂತಿ ಸಾಗರ್​ ರೆಸ್ಟೋರೆಂಟ್​, ಶಾಂತಿ ಸಾಗರ್​, ಮಣಿಪಾಲದ ಶ್ರೀಶಾಂತಿ ಸಾಗರ್​ ಹೊಟೇಲ್​ಗಳಿಗೆ ರಜೆ ಸಾರಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net