ಗೋಧಿ ಕಳುಹಿಸುವುದಾಗಿ ನಂಬಿಸಿ ಶಿವಮೊಗ್ಗದ ಉದ್ಯಮಿಗೆ ವಂಚನೆ

Doddapete police station
ದೊಡ್ಡಪೇಟೆ ಪೊಲೀಸ್ ಠಾಣೆ
Published on

ಶಿವಮೊಗ್ಗ: ಒಂದು ಲೋಡ್ ಗೋಧಿ ಕಳುಹಿಸುವುದಾಗಿ ನಂಬಿಸಿ ಶಿವಮೊಗ್ಗದ ಉದ್ಯಮಿಯೊಬ್ಬರಿಗೆ ಗುಜರಾತ್ ಮೂಲದ ವ್ಯಕ್ತಿಯೊಬ್ಬ 7 ಲಕ್ಷ ರೂ. ವಂಚಿಸಿದ್ದಾನೆ.

ಶಿವಮೊಗ್ಗದ ಮನ್ಸೂರ್ ಎಂಬುವರು ಭತ್ತ, ಜೋಳ, ಗೋಧಿ ವ್ಯಾಪಾರ ಮಾಡುತ್ತಿದ್ದಾರೆ. ಗುಜರಾತ್ ಮೂಲದ ಶೇಖ್ ಮೊಹಮ್ಮದ್ ಫರೀದ್ ಎಂಬಾತ ಮನ್ಸೂರ್ ಅವರಿಗೆ ಪರಿಚಯವಾಗಿದ್ದು, ಗೋಧಿ ಕೊಡಿಸುವುದಾಗಿ ನಂಬಿಸಿದ್ದ. ಒಮ್ಮೆ ಆತ ಕರೆ ಮಾಡಿ ಒಂದು ಲೋಡ್ ಗೋಧಿ ಕಳುಹಿಸುವುದಾಗಿ ತಿಳಿಸಿ ಮೊದಲಿಗೆ 2.50 ಲಕ್ಷ ರೂ. ಕಳುಹಿಸುವಂತೆ ತಿಳಿಸಿದ್ದ. ಆತನ ಮಾತು ನಂಬಿ ಉದ್ಯಮಿ ಮನ್ಸೂರ್ ಹಣ ಕಳುಹಿಸಿದ್ದರು.

ಪುನಃ ಕರೆ ಮಾಡಿದ್ದ ಶೇಖ್ ಮೊಹಮ್ಮದ್ ಫರೀದ್ 4.50 ಲಕ್ಷ ರೂ.ವರ್ಗಾಯಿಸುವಂತೆ ತಿಳಿಸಿದ್ದ. ಒಟ್ಟು 7 ಲಕ್ಷ ರೂ. ವರ್ಗಾಯಿಸಿದರೂ ಗೋಧಿ ಲೋಡ್ ಬರದಿದ್ದರಿಂದ ಮನ್ಸೂರ್ ಅವರು ಶೇಖ್ ಮೊಹಮ್ಮದ್‌ಗೆ ಕರೆ ಮಾಡಿದ್ದರು. ಆಗ ಹಣ ಕೊಡುವುದಿಲ್ಲ, ಗೋಧಿ ಕಳುಹಿಸುವುದಿಲ್ಲ ಎಂದು ಆತ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net