ಬೂದುಕುಂಬಳ ಖರೀದಿಸಿದ ಉದ್ಯಮಿ ಹಂಚಿದ್ದು ಬಡವರಿಗೆ

Boodu kumbala
Published on

ಸುರತ್ಕಲ್: ಕರೊನಾ ಲಾಕ್‌ಡೌನ್ ಸಂದರ್ಭ ಹಲವರು ಬಡವರಿಗೆ, ಕೃಷಿಕರಿಗೆ ಹಲವು ರೀತಿ ನೆರವಾಗಿದ್ದಾರೆ. ನೀರುಮಾರ್ಗ ನಿವಾಸಿ, ಆಸ್ಟ್ರೇಲಿಯಾದಲ್ಲಿ ಉದ್ಯಮಿಯಾಗಿರುವ ಸುಧೀರ್ ಶೆಟ್ಟಿ ಎಂಬುವರು ಸುಮಾರು 50 ಸಾವಿರ ಮೌಲ್ಯದ 5.2 ಟನ್ (ಒಂದು ಟೆಂಪೋದಷ್ಟು) ಬೂದು ಕುಂಬಳಕಾಯಿಯನ್ನು, ಇದನ್ನು ಬೆಳೆದು ಕಷ್ಟದಲ್ಲಿದ್ದ ಬಳ್ಕುಂಜೆಯ ರೈತನಿಂದ ಖರೀದಿಸ್ದಿ, ಅವುಗಳನ್ನು ಬಡವರಿಗೆ ಹಂಚಿದ್ದ್ದಾರೆ.

ಸುರತ್ಕಲ್ ಹಳೇ ಮುಖ್ಯರಸ್ತೆಯ ಮನೆಯಲ್ಲಿ ಇವುಗಳನ್ನು ಶುಕ್ರವಾರ ಬೆಳಗ್ಗೆ ಕರ್ಫ್ಯೂ ಸಡಿಲಿಕೆ ಅವಧಿಯಲ್ಲಿ ಆಸಕ್ತರಿಗೆ, ಬಡವರಿಗೆ ಹಂಚಲಾಯಿತು. ಬೂದು ಕುಂಬಳಕಾಯಿ ಧರ್ಮಕ್ಕೆ ನೀಡಬಾರದು ಎಂಬ ಕ್ರಮವಿರುವ ಕಾರಣ 10 ರೂ.ಗೆ ಹತ್ತರಂತೆ, ಅಥವಾ ಐದು ರೂ.ಗೆ 2ರಂತೆ, ನೀಡಿದ ಹಣ ಪಡೆದು ನೀಡಿದ್ದೇವೆ ಎಂದು ಮನೆಯ ನಿವಾಸಿ ಕಿರಣ್ ಜೆ.ಭಂಡಾರಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net