ಸ್ಕೂಟಿ ಸ್ಕಿಡ್ ಆಗಿ ಕೆರೆಗೆ ಬಿದ್ದು ಉದ್ಯಮಿ ಸಾವು

Divakara Shetty
ದಿವಾಕರ ಶೆಟ್ಟಿ
Published on

ಕೋಟ: ತೆಕ್ಕಟ್ಟೆ ಗ್ರಾಪಂ ವ್ಯಾಪ್ತಿಯ ಮಲ್ಯಾಡಿ ಸಮೀಪ ಮಂಗಳವಾರ ರಾತ್ರಿ ಸ್ಕೂಟಿ ಸ್ಕಿಡ್ ಆಗಿ ಕೆರೆಗೆ ಬಿದ್ದು ಸವಾರ, ಉದ್ಯಮಿ ದಿವಾಕರ ಶೆಟ್ಟಿ (65) ಎಂಬುವರು ಮೃತಪಟ್ಟಿದ್ದಾರೆ.

ಮನೆಗೆ ತೆರಳುತ್ತಿದ್ದ ವೇಳೆ ಸುರಿಯುತ್ತಿದ್ದ ಭಾರಿ ಮಳೆಯಿಂದ ಸ್ಕೂಟಿ ಸ್ಕಿಡ್ ಆಗಿದೆ. ಕೆರೆಗೆ ತಡೆಗೋಡೆ ಇಲ್ಲದ ಕಾರಣ 15-20 ಅಡಿ ಆಳದ ಕೆರೆಗೆ ಸವಾರನ ಸಮೇತ ಸ್ಕೂಟಿ ಬಿದ್ದಿದೆ. ದಿವಾಕರ ಶೆಟ್ಟಿ ಅವರು ತಡರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಹಾಗೂ ಸ್ಥಳೀಯರು ಹುಡುಕಾಡಿದಾಗ ಸಮೀಪದ ಕೆರೆಯಲ್ಲಿ ಸ್ಕೂಟಿ ಪತ್ತೆಯಾಗಿತ್ತು. ಕೂಡಲೇ ಪೊಲೀಸರಿಗೆ, ಅಗ್ನಿಶಾಮಕದಳ ಹಾಗೂ ಮುಳುಗುತಜ್ಞ ಈಶ್ವರ ಮಲ್ಪೆ ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಈಶ್ವರ ಮಲ್ಪೆ ಕೆರೆಗೆ ಧುಮುಕಿ ಸ್ಕೂಟರ್ ಮೇಲಕ್ಕೆ ಎತ್ತಿದರು. ಹುಡುಕಾಟ ನಡೆಸಿದಾಗ ಬುಧವಾರ ನಸುಕಿನ ಜಾವ 1.30ರ ಸುಮಾರಿಗೆ ಮೃತದೇಹ ಪತ್ತೆಯಾಗಿದೆ. ಕೋಟದ ಜೀವನ್ ಮಿತ್ರ ತಂಡ ಹುಡುಕಾಟಕ್ಕೆ ಸಾಥ್ ನೀಡಿತ್ತು. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net