ವ್ಯಾಪಾರ ವಹಿವಾಟಿಗೆ ಅಡಚಣೆ

26 KURGODU 05
ಕುರುಗೋಡಿನಲ್ಲಿ ಸೋಮವಾರ ನಿರಂತರ ಮಳೆ ಸುರಿಯುತ್ತಿರುವುದು.
Published on

ಕುರುಗೋಡು: ತಾಲೂಕಿನಲ್ಲಿ ಸೋಮವಾರ ಬೆಳಗ್ಗೆ ಆರಂಭವಾದ ಮಳೆ ಸಂಜೆವರೆಗೂ ಎಡಬಿಡದೆ ಸುರಿಯಿತು. ಇದರಿಂದ ಜನ ಜೀವನ, ವ್ಯಾಪಾರ ವಹಿವಾಟಿಗೆ ಅಡಚಣೆ ಉಂಟಾಯಿತು.

ನಿರಂತರ ಮಳೆಗೆ ಮನೆಯಿಂದ ಜನ ಹೊರಬಾರದ ಪರಿಣಾಮ ಪಟ್ಟಣದ ತೇರು ಬೀದಿ, ಗೆಣಿಕೆಹಾಳು , ನೀಲಮ್ಮ ಮಠದ ರಸ್ತೆಯಲ್ಲಿನ ವಿವಿಧ ಅಂಗಡಿಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಮೋಡ ಕವಿದ ವಾತಾವರಣ ಜೊತೆಗೆ ತುಂತುರು ಮಳೆಗೆ ಚಳಿ ಆವರಿಸಿದ್ದು, ಹಳ್ಳಿಗಳಲ್ಲಿ ಟೀ, ಕಾಫಿ ಮೊರೆಹೋಗಿದ್ದು ಕಂಡು ಬಂತು. ನಿತ್ಯ ವಾಹನ ದಟ್ಟಣೆಯಿಂದ ತುಂಬಿರುತ್ತಿದ್ದ ಕುರುಗೋಡು, ಕಂಪ್ಲಿ ಹೆದ್ದಾರಿಯಲ್ಲಿ ಆಗೊಂದು, ಈಗೊಂದು ವಾಹನ ಬಿಟ್ಟರೆ ಸಂಚಾರ ವಿರಳವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net