ಸಾರ್ವಜನಿಕರ ಸಂಚಾರಕ್ಕೆ ವ್ಯಾಪಾರ ಅಡ್ಡಿಯಾಗದಿರಲಿ

ಹನೂರಿನಲ್ಲಿ ಪಾದಚಾರಿ ಮಾರ್ಗವನ್ನು ಇನ್ಸ್‌ಪೆಕ್ಟರ್ ಶಶಿಕುಮಾರ್ ಪರಿಶೀಲಿಸಿದರು. ಕೃಷ್ಣ, ರಾಘವೇಂದ್ರ, ಮಣಿಕಂಠ, ಶಿವು  ಇದ್ದರು.
ಹನೂರಿನಲ್ಲಿ ಪಾದಚಾರಿ ಮಾರ್ಗವನ್ನು ಇನ್ಸ್‌ಪೆಕ್ಟರ್ ಶಶಿಕುಮಾರ್ ಪರಿಶೀಲಿಸಿದರು. ಕೃಷ್ಣ, ರಾಘವೇಂದ್ರ, ಮಣಿಕಂಠ, ಶಿವು ಇದ್ದರು.
Published on

ಹನೂರು: ಸಾರ್ವಜನಿಕರ ಸಂಚಾರಕ್ಕೆ ಯಾವುದೇ ರೀತಿಯಲ್ಲೂ ಸಮಸ್ಯೆಯಾಗದಂತೆ ವ್ಯಾಪಾರ, ವಹಿವಾಟು ನಡೆಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಇನ್‌ಸ್ಪೆಕ್ಟರ್ ಶಶಿಕುಮಾರ್ ಎಚ್ಚರಿಸಿದರು.

ಪಟ್ಟಣದಲ್ಲಿ ಮಂಗಳವಾರ ಸಿಬ್ಬಂದಿಯೊಂದಿಗೆ ಪರೇಡ್ ನಡೆಸುತ್ತಿದ್ದ ವೇಳೆ ರಸ್ತೆ ಬದಿ ವ್ಯಾಪಾರಸ್ಥರನ್ನು ಉದ್ದೇಶಿಸಿ ಮಾತನಾಡಿ, ಪಾದಚಾರಿ ಮಾರ್ಗವನ್ನು ನಿರ್ಮಿಸಿರುವುದು ಸಾರ್ವಜನಿಕರು ಸಂಚರಿಸುವುದಕ್ಕಾಗಿ. ಆದರೆ ಆ ಸ್ಥಳವನ್ನು ಆಕ್ರಮಿಸಿಕೊಂಡು ವ್ಯಾಪಾರ ಮಾಡುತ್ತಿರುವುದು ಸರಿಯಲ್ಲ. ಇದರಿಂದ ಜನರು ಸಂಚರಿಸಲು ಸಮಸ್ಯೆಯಾಗಿದೆ. ಈ ಸಂಬಂಧ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದು ನಿಗದಿತ ಸ್ಥಳವನ್ನು ಗುರುತಿಸಿ ವ್ಯಾಪಾರ ನಡೆಸಬೇಕು ಎಂದು ತಿಳಿಸಿದರು.

ಇನ್ನು ಪಟ್ಟಣದ ಖಾಸಗಿ ಬಸ್ ನಿಲ್ದಾಣಕ್ಕೆ ತೆರಳಿದ ಇನ್‌ಸ್ಪೆಕ್ಟರ್, ನಿಗದಿತ ಸ್ಥಳದಲ್ಲಿ ಬಸ್‌ಗಳನ್ನು ನಿಲ್ಲಿಸಬೇಕು. ಅಡ್ಡಾದಿಡ್ಡಿ ನಿಲ್ಲಿಸಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಚಾಲಕರಿಗೆ ಎಚ್ಚರಿಕೆ ನೀಡಿದರಲ್ಲದೆ, ಬಸ್ ನಿಲ್ದಾಣದ ಆಸುಪಾಸು ವ್ಯಾಪಾರ ಮಾಡುವ ತಳ್ಳುವ ಗಾಡಿ, ಕಾರು, ಬೈಕ್ ಹಾಗೂ ಇತರ ವಾಹನಗಳು ನಿಲುಗಡೆಯಾಗದಂತೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.

ಎಎಸೈ ಕೃಷ್ಣ, ಮುಖ್ಯ ಪೇದೆ ರಾಘವೇಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net