ಉದ್ದಿಮೆ ಪರವಾನಗಿ ನವೀಕರಣ: ಜೂ.10 ಮತ್ತು 12ರಂದು ಆಂದೋಲನ

Mandya CMC
Published on

ಮಂಡ್ಯ: ನಗರಸಭಾ ವ್ಯಾಪ್ತಿಯ ವ್ಯಾಪಾರಸ್ಥರು/ಅಂಗಡಿ, ಹೊಟೇಲ್ ಮಾಲೀಕರು ಹಾಗೂ ಇತರ ಎಲ್ಲ ಉದ್ದಿಮೆದಾರರು ಪರವಾನಗಿ ನವೀಕರಣ ಮಾಡಿಸಿಕೊಳ್ಳಲು ಅಥವಾ ಹೊಸ ಉದ್ದಿಮೆ ಪರವಾನಗಿ ಪಡೆದುಕೊಳ್ಳಲು ಜೂ.10 ಮತ್ತು 12 ರಂದು ನಗರಸಭಾ ಕಚೇರಿ ಸಭಾಂಗಣದಲ್ಲಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ.

ಉದ್ದಿಮೆದಾರರು ಕಚೇರಿಯಿಂದ ನೀಡುವ ಅರ್ಜಿ ಪಡೆದು ಬಾಡಿಗೆ ಕರಾರು, ಪಾಸ್‌ಪೋರ್ಟ್ ಅಳತೆಯ ಪೋಟೋ, ಆಧಾರ್ ಕಾರ್ಡ್, ಅಂಗಡಿ ಪೊಟೋ, ಅಂಗಡಿ ಸ್ವಂತ ಕಟ್ಟಡವಿದ್ದಲ್ಲಿ ತೆರಿಗೆ ಪಾವತಿ ರಶೀದಿಯನ್ನು ಸಲ್ಲಿಸಬೇಕೆಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net