ಡಿ.7ರಂದು ಬಿಜಿನೆಸ್ ಡೇ ಕಾರ್ಯಕ್ರಮ

business day
Published on

ಕುಂದಾಪುರ: ವಿ-ವಿಸ್ತಾರ ಶೀರ್ಷಿಕೆಯಡಿ ಡಿ.7ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಬಿಜಿನೆಸ್ ಡೇ ಕಾರ್ಯಕ್ರಮ ಕುಂದಾಪುರದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಠಾರದಲ್ಲಿ ನಡೆಯಲಿದೆ. ಅರೇಕಾ ಟಿ ಸಂಸ್ಥಾಪಕ, ಸಿಇಒ ನಿವೇದನ್ ನೆಂಪೆ ಕಾರ್ಯಕ್ರಮ ಉದ್ಘಾಟಿಸುವರು. ಶ್ರೀ ವೆಂಕಟರಮಣ ದೇವ್ ಎಜುಕೇಶನಲ್ ಮತ್ತು ಕಲ್ಚರಲ್ ಟ್ರಸ್ಟ್ ಅಧ್ಯಕ್ಷ ಕೆ.ರಾಮಕೃಷ್ಣ ಕಾಮತ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಉದ್ಯಮಿ ಬಿ.ಎಸ್.ಸುರೇಶ ಶೆಟ್ಟಿ ಉಪ್ಪುಂದ, ದಿನೇಶ ಹೆಗ್ಡೆ ಮೊಳಹಳ್ಳಿ ಭಾಗವಹಿಸಲಿದ್ದಾರೆ. ಟ್ರಸ್ಟ್ ಕಾರ್ಯದರ್ಶಿ ಕೆ.ರಾಧಾಕೃಷ್ಣ ಶೆಣೈ, ಕೋಶಾಧಿಕಾರಿ ಕೆ.ಲಕ್ಷ್ಮೀನಾರಾಯಣ ಶೆಣೈ ಉಪಸ್ಥಿತರಿರುವರು. ಸಮಾಜಸೇವಕ ಬೆಂಕಿಮಣಿ ಸಂತು (ಮಾನವೀಯ ಸೇವೆ), ರಾಘವೇಂದ್ರ ನೆಂಪು (50 ಬಾರಿ ರಕ್ತದಾನ), ಮಂಜುನಾಥ ನಾಯ್ಕ ಕನ್ನೇರಿ (ಮುಳುಗು ತಜ್ಞರು), ಶಂಕರ ಪೂಜಾರಿ ಅಂಪಾರು (ಉರಗ ರಕ್ಷಕರು), ಗಣೇಶ ಕಂಬದಕೋಣೆ (ಸ್ವಚ್ಛತಾ ಸೇವೆ) ಅವರನ್ನು ಸನ್ಮಾನಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net