

ಕಾರ್ಕಳ: ವಾಣಿಜ್ಯ ಕ್ಷೇತ್ರದಲ್ಲಿ ತೆರಿಗೆ ಬಗ್ಗೆ ತಿಳಿದುಕೊಳ್ಳುವುದು ಪ್ರತಿಯೊಬ್ಬರ ಹಕ್ಕು. ಆಯವ್ಯಯಗಳು ದೇಶದ ಬೆಳವಣಿಗೆಯಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ ಎಂದು ಎನ್‌ಸಿಎಸ್ ಚಾರ್ಟರ್ಡ್ ಅಕೌಂಟೆಂಟ್ ವ್ಯವಸ್ಥಾಪಕ ಪಾಲುದಾರ ಲೆಕ್ಕಪರಿಶೋಧಕ ನಿತೀಶ್ ಶೆಟ್ಟಿ ಹೇಳಿದರು.
ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಸಭಾಂಗಣದಲ್ಲಿ ವಾರ್ಷಿಕ ಆಯವ್ಯಯ 2024-25ರ ಬ್ಯುಸಿನೆಸ್ ಕ್ರಿಯೇಟಿವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎನ್‌ಸಿಎಸ್ ಲೆಕ್ಕಪರಿಶೋಧಕ ಚರಣ್ ರಾಜ್ ಮಚ್ಚೂರ್ ಮಾತನಾಡಿ, ಒಂದು ಸರ್ಕಾರದ ಬಜೆಟ್ ಉದ್ದೇಶ ಆಯಾ ಸರ್ಕಾರದ ನಿರೀಕ್ಷಿತ ಆದಾಯ ಮತ್ತು ನಿರೀಕ್ಷಿತ ವೆಚ್ಚಗಳ ಸಾರಾಂಶ ಒಳಗೊಂಡಿರುತ್ತದೆ. ಉದ್ದಿಮೆದಾರರು ಆಯವ್ಯಯಗಳ ಬದಲಾವಣೆ ಪರಿಶೀಲಿಸಿ ಅಲ್ಪಾವಧಿ ಹಾಗೂ ದೀರ್ಘವಧಿ ತೆರಿಗೆ ಗಮನಿಸುತ್ತಿರಬೇಕು ಎಂದರು.
ಎಸ್‌ಸಿಎಸ್‌ನ ಲೆಕ್ಕಪರಿಶೋಧಕ ಸುಮಂತ್ ಬಂಗೇರ, ಸಹಸಂಸ್ಥಾಪಕ ಅಮೃತ್ ರೈ ಪ್ರಸ್ತಾವಿಕವಾಗಿ ಮಾತನಾಡಿದರು. ಸಹಸಂಸ್ಥಾಪಕ ಗಣನಾಥ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಸರಕು ಮತ್ತು ಸೇವೆಗಳ ಮೇಲೆ ವಿಧಿಸುವ ಎಲ್ಲ ಪರೋಕ್ಷ ತೆರಿಗೆಗಳನ್ನು ಬದಲಾಯಿಸುತ್ತದೆ. ತೆರಿಗೆ ರಚನೆಯಿಂದ ವಿವಿಧ ರೀತಿಯ ತೆರಿಗೆ ತೆಗೆದು ಹಾಕುವುದು ಜಿಎಸ್‌ಟಿ ಅನುಷ್ಠಾನದ ಪ್ರಾಥಮಿಕ ಗುರಿಗಳಲ್ಲಿ ಒಂದಾಗಿದೆ.-ಸುಮಂತ್ ಬಂಗೇರ ಎಸ್‌ಸಿಎಸ್‌ನ ಲೆಕ್ಕಪರಿಶೋಧಕ