ಬಸ್​ಗಳು ಬೆಳಗ್ಗೆ ಫುಲ್, ಮಧ್ಯಾಹ್ನ ಖಾಲಿ

Bus 1
Published on

ಬೆಂಗಳೂರು: ಲಾಕ್​ಡೌನ್ ಸಡಿಲಿಕೆಯಿಂದ ಆರಂಭವಾಗಿರುವ ಕೆಎಸ್​ಆರ್​ಟಿಸಿ ಬಸ್ ಸೇವೆಯ 2ನೇ ದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡುಬಂತು.

ಮೊದಲ ದಿನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 1,606 ಬಸ್​ಗಳ ಮೂಲಕ 53 ಸಾವಿರ ಜನರು ಪ್ರಯಾಣಿಸಿದ್ದರು. ಆದರೆ, ಉತ್ತರ ಕರ್ನಾಟಕಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಇರದ ಕಾರಣ, ಸಾವಿರಾರು ಜನರು ಸಮಸ್ಯೆ ಅನುಭವಿಸಿದ್ದರು. ಅದನ್ನು ಮನಗಂಡು ಬುಧವಾರ (ಮೇ 20) ಬೆಂಗಳೂರಿನಿಂದ ವಿಜಯ ಪುರ, ಯಾದಗಿರಿ ಸೇರಿ ರಾಜ್ಯದ 27 ಜಿಲ್ಲೆಗಳಿಗೆ ಬಸ್ ಸೇವೆ ಒದಗಿಸಲಾಗಿತ್ತು. ಹೀಗಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಬುಧವಾರ 2,633 ಬಸ್​ಗಳ ಮೂಲಕ 81,593 ಜನರು ಪ್ರಯಾಣಿಸಿದ್ದಾರೆ.

ಬೆಳಗ್ಗೆ ಫುಲ್, ಮಧ್ಯಾಹ್ನಕ್ಕೆ ಖಾಲಿ: ಉತ್ತರ ಕರ್ನಾಟಕದ ಜಿಲ್ಲೆಗಳಿಗೂ ಬಸ್ ಸೇವೆ ಇರಲಿದೆ ಎಂಬುದನ್ನು ತಿಳಿದಿದ್ದ ಜನರು ಬೆಳಗ್ಗೆ 5 ಗಂಟೆಗೆ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಂದಿದ್ದರು. 10 ಗಂಟೆವರೆಗೆ ನಿಲ್ದಾಣ ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು. ಬೆಳಗ್ಗೆಯೇ ಜನರೆಲ್ಲರೂ ಪ್ರಯಾಣಿಸಿದ ಹಿನ್ನೆಲೆಯಲ್ಲಿ ಮಧ್ಯಾಹ್ನದ ವೇಳೆ ನಿಲ್ದಾಣ ಬಹುತೇಕ ಖಾಲಿಯಾಗಿತ್ತು. ಬಸ್​ಗಳು ಪ್ರಯಾಣಿಕರಿಗೆ ಗಂಟೆಗಟ್ಟಲೆ ಕಾಯುವಂತಾಯಿತು.

ಮುಂಗಡ ಟಿಕೆಟ್ ವ್ಯವಸ್ಥೆ

ಮೊದಲ ದಿನದ ಸೇವೆಯಲ್ಲಿ ಟಿಕೆಟ್ ನೀಡು ವುದು, ವ್ಯಕ್ತಿಗತ ಅಂತರ ಕಾಪಾಡುವಲ್ಲಿ ಎಡವಿದ್ದ ಕೆಎಸ್ಸಾರ್ಟಿಸಿ, 2ನೇ ದಿನ ಸುಧಾರಿಸಿತು. ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರತಿ ಪ್ರಯಾಣಿಕರಿಗೂ ಮುಂಗಡ ಟಿಕೆಟ್ ಕಾಯ್ದಿರಿಸಿ ಅಲ್ಲೇ ಮುದ್ರಿಸಿ ಟಿಕೆಟ್ ನೀಡಲಾಯಿತು. ಬಸ್​ಗಳಲ್ಲಿ ಟಿಕೆಟ್ ನೀಡುವುದನ್ನು ನಿಷೇಧಿಸಲಾಗಿತ್ತು.

ವ್ಯಕ್ತಿಗತ ಅಂತರ ನಿಯಮ ನಿರ್ಲಕ್ಷ್ಯ

ಎಷ್ಟೇ ಮುಂಜಾಗ್ರತೆ ವಹಿಸಿದರೂ ಪ್ರಯಾಣಿಕರ ನಡುವೆ ವ್ಯಕ್ತಿಗತ ಅಂತರ ಕಾಪಾಡುವಲ್ಲಿ ಕೆಎಸ್ಸಾರ್ಟಿಸಿ ಎಡವಿತು. ಉತ್ತರ ಕರ್ನಾಟಕ ಯಾದಗಿರಿ, ಬೀದರ್, ಕಲಬುರಗಿ, ವಿಜಯಪುರ ಮೊದಲಾದ ಜಿಲ್ಲೆಗಳಿಗೆ ಬೆಳಗ್ಗೆ 7 ಗಂಟೆಗೆ ಬಸ್​ಗಳು ಹೊರಡುತ್ತದೆ ಎಂದು ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಪ್ರಯಾಣಿಕರು ಮುಂಜಾನೆ 5 ಗಂಟೆಗೆ ಬಸ್ ನಿಲ್ದಾಣಕ್ಕೆ ಬಂದಿದ್ದರು. ನಿಲ್ದಾಣದ ಟಿಕೆಟ್ ಕೌಂಟರ್, ಪ್ಲಾಟ್​ಫಾಮರ್್​ಗಳಲ್ಲಿ ವ್ಯಕ್ತಿಗತ ಅಂತರ ನಿರ್ಲಕ್ಷಿಸಿ ಗುಂಪುಗುಂಪಾಗಿ ನಿಂತಿದ್ದರು. ಬಸ್ ಹತ್ತುವಾಗಲೂ ವ್ಯಕ್ತಿಗತ ಅಂತರ ಮರೆತು ಮುಗಿಬಿದ್ದರು. ಕೆಎಸ್​ಅರ್​ಟಿಸಿ ಸಿಬ್ಬಂದಿಗೂ ಇದನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.

ಮಾನವೀಯತೆ ಮೆರೆದ ಅಧಿಕಾರಿಗಳು

ಬಸ್ ನಿಲ್ದಾಣಕ್ಕೆ ಬಂದು ಬಸ್ ಟಿಕೆಟ್ ಖರೀದಿಸಲು ಹಣವಿಲ್ಲದವರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಯಿತು. ಯಾದಗಿರಿಗೆ ತೆರಳಲು ಇಬ್ಬರು ಮಕ್ಕಳೊಂದಿಗೆ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಂದಿದ್ದ ಸಿದ್ದಪ್ಪ ಹಾಗೂ ಭೀಮಮ್ಮ ಎಂಬ ಕಾರ್ವಿುಕ ದಂಪತಿ ಟಿಕೆಟ್ ಖರೀದಿಸಲು ಹಣವಿಲ್ಲದೆ ಪರದಾಡಿದರು. ನಗರದ ಗಾಂಧಿಬಜಾರ್ ಬಳಿ ಗಾರೆ ಕೆಲಸ ಮಾಡುತ್ತಿದ್ದ ದಂಪತಿಗೆ ಗುತ್ತಿಗೆದಾರ ಹಣ ನೀಡದ ಪರಿಣಾಮ ಊರಿಗೆ ತೆರಳಲಾಗದೆ ನಿಲ್ದಾಣದಲ್ಲಿ ಕಣ್ಣೀರಿಟ್ಟರು. ಬೆಳಗ್ಗೆ 6 ಗಂಟೆಗೆ ನಿಲ್ದಾಣಕ್ಕೆ ಬಂದಿದ್ದ ದಂಪತಿ ಗೋಳಾಡುತ್ತಿದ್ದುದನ್ನು ನೋಡಲಾರದೆ, ಕೆಎಸ್​ಆರ್​ಟಿಸಿ ಹಿರಿಯ ಅಧಿಕಾರಿಗಳು, ದಂಪತಿ ಮತ್ತು ಮಕ್ಕಳಿಗೆ ಯಾದಗಿರಿ ಬಸ್ ಹತ್ತಿಸಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದರು.ಬೆಂಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net