

ಕುಂದಾಪುರ: ನಗರದ ಮೂಲಕ ವಿವಿಧ ಊರುಗಳಿಗೆ ಹೋಗುವ ಸರ್ಕಾರಿ ಬಸ್‌ಗಳು ರಾತ್ರಿ ವೇಳೆ ಶಾಸಿ ಸರ್ಕಲ್ ಅಥವಾ ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ಬಾರದೆ ್ಲೈಓವರ್ ಮೇಲಿಂದಲೇ ಸಂಚರಿಸುತ್ತಿದ್ದು, ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ. ಕುಂದಾಪುರ ಮೇಲ್ಸೇಸುತುವೆ ನಿರ್ವಾಣವಾದ ಬಳಿಕ ಉತ್ತರಕನ್ನಡ ಹಾಗೂ ಉತ್ತರಕರ್ನಾಟಕದ ವಿವಿಧ ಊರುಗಳಿಂದ, ಧರ್ಮಸ್ಥಳ ಮತ್ತು ಮಂಗಳೂರು ಕಡೆ ಸಂಚರಿಸುವ ಎಲ್ಲ ಬಸ್‌ಗಳು ನಗರದೊಳಗೆ ಬರದೇ ಮೇಲ್ಸೇತುವೆ ಮೂಲಕ ಹೋಗುತ್ತವೆ. ಹೀಗಾಗಿ ಶಾಸ್ತ್ರಿ ವೃತ್ತ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುವ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನಿಲ್ದಾಣಕ್ಕೆ ಬರುವಂತೆ ಆಗ್ರಹ: ರಾತ್ರಿ ವೇಳೆ ದಕ್ಷಿಣಕನ್ನಡದ ವಿವಿಧೆಡೆಗಳಿಗೆ ಸಂಚರಿಸುವ ಉತ್ತರಕನ್ನಡ ಹಾಗೂ ಉತ್ತರಕರ್ನಾಟಕದ ಡಿಪೋಗಳ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಕಡ್ಡಾಯವಾಗಿ ಕುಂದಾಪುರ ಬಸ್ ನಿಲ್ದಾಣಕ್ಕೆ ಬರುವಂತೆ ನಿರ್ದೇಶಿಸಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ. ಹಗಲಿನಲ್ಲಿ ಉಡುಪಿ ಕಡೆಯಿಂದ ಬರುವ ಬಸ್‌ಗಳು ್ಲೈಓವರ್ ಮೂಲಕ ಸಾಗಿ ನಿಲ್ದಾಣಕ್ಕೆ ತಲುಪಿ ನಂತರ ಶಾಸಿ ಸರ್ಕಲ್ ಮೂಲಕ ಬೈಂದೂರು ಕಡೆಗೆ ಹೋಗುತ್ತಿದ್ದವು. ಇದಕ್ಕೆ ಪ್ರಯಾಣಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆಗ ನಿಗಮ ಹೊಸ ಆದೇಶ ಹೊರಡಿಸಿ ಉಡುಪಿ ಕಡೆಯಿಂದ ಬರುವ ಎಲ್ಲ ಬಸ್ ಶಾಸ್ತ್ರಿ ಸರ್ಕಲ್‌ಗೆ ಹೋಗಿಯೇ ಬಸ್ ನಿಲ್ದಾಣಕ್ಕೆ ಹೋಗಬೇಕೆಂದು ಸೂಚಿಸಿತ್ತು. ಹೀಗಾಗಿ ಮಂಗಳೂರು, ಉಡುಪಿ, ಬ್ರಹ್ಮಾವರ ಕಡೆಯಿಂದ ಬರುವವರಿಗೆ ಕೆಎಸ್‌ಆರ್‌ಟಿಸಿ ಬಸ್ ಅನುಕೂಲವಾಗಿದೆ. ಆದರೆ ರಾತ್ರಿ ಬಸ್‌ಗಳು ನಿಲ್ದಾಣಕ್ಕೆ ಬಂದೇ ಹೋಗುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.
ಸರ್ಕಾರ ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಒದಗಿಸಿದ್ದು ತುಂಬಾ ಅನುಕೂಲವಾಗಿದೆ. ದೂರದ ಊರುಗಳಿಗೆ ತೆರಳುವ ಸರ್ಕಾರಿ ಬಸ್‌ಗಳು ಬೈಂದೂರಿನಲ್ಲಿ ವಿಶ್ರಾಂತಿಗೆ ನಿಲ್ಲಿಸುವ ಸ್ಥಳದ ಕುರಿತು ಹಾಗೂ ಕುಂದಾಪುರ ನಿಲ್ದಾಣಕ್ಕೆ ಹೋಗದ ಕುರಿತು ಸಾರ್ವಜನಿಕರಿಂದ ದೂರು ಬಂದಿದೆ. ಅಧಿಕಾರಿಗಳ ಜತೆ ವಾತಾಡಿದ್ದೇನೆ. ಗುರುರಾಜ ಗಂಟಿಹೊಳೆ, ಬೈಂದೂರು ಶಾಸಕ