ಬಸ್‌ನಲ್ಲಿ ಮಹಿಳೆಯ ಚಿನ್ನದ ಸರ ಕಳ್ಳತನ

26-DVD-1
ಜಾಲಹಳ್ಳಿ ಠಾಣೆಯಲ್ಲಿ ಪ್ರಯಾಣಿಕರ ಬ್ಯಾಗ್ ಪರಿಶೀಲಿಸಲಾಯಿತು.
Published on

ದೇವದುರ್ಗ: ತಾಲೂಕಿನ ತಿಂಥಣಿ ಬ್ರಿಡ್ಜ್ ಬಳಿ ಬಸ್ ಹತ್ತುವ ವೇಳೆ ಮಹಿಳೆಯ ಐದು ತೊಲ ಬಂಗಾರದ ಸರ ಭಾನುವಾರ ಕಳ್ಳತನವಾಗಿದೆ.

ಪಟ್ಟಣದ ನಿವಾಸಿ ಲಕ್ಷ್ಮೀ ಶಿವರಾಜ ಅವರು ಬಳ್ಳಾರಿಯಿಂದ ತಿಂಥಣಿ ಬ್ರಿಡ್ಜ್ ಮೂಲಕ ದೇವದುರ್ಗಕ್ಕೆ ಹೋಗುತ್ತಿದ್ದರು. ಆಗ ಬ್ಯಾಗ್‌ನಲ್ಲಿರುವ ಚಿನ್ನದ ಸರ ಕಳ್ಳತನವಾಗಿದೆ. ತಕ್ಷಣವೇ ಎಚ್ಚೆತ್ತುಕೊಂಡ ಮಹಿಳೆ ಚಾಲಕ-ನಿರ್ವಾಹಕರಿಗೆ ತಿಳಿಸಿದ್ದಾರೆ.

ನಂತರ ಜಾಲಹಳ್ಳಿ ಠಾಣೆಗೆ ಬಸ್ ಕರೆತಂದು ಪ್ರಯಾಣಿಕರ ಬ್ಯಾಗ್‌ಗಳನ್ನು ಪರಿಶೀಲನೆ ಮಾಡಲಾಯಿತು. ಅದರೆ ಚಿನ್ನ ಸಿಗಲಿಲ್ಲ. ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net