ಬಸ್​ ಹತ್ತುತ್ತಿದ್ದ ಮಹಿಳೆಯ ಚಿನ್ನಾಭರಣ ದೋಚಿದ ಖದೀಮರು

Thief
Published on

ಸವಣೂರ: ಬಸ್​ ಹತ್ತುತ್ತಿದ್ದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್​ನಲ್ಲಿದ್ದ 3.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಪಟ್ಟಣದ ಬಸ್​ ನಿಲ್ದಾಣದಲ್ಲಿ ಮಂಗಳವಾರ ನಡೆದಿದೆ.

ಶಮಶಾದ ಜಾವೀದ ಕನಕವಾಡ (38) ಎಂಬುವರ ಚಿನ್ನಾಭರಣ ದೋಚಿರುವುದು.

ಇವರು ಸವಣೂರಿನಿಂದ ಗದಗಗೆ ಹೋಗುವ ಸಲುವಾಗಿ ಸವಣೂರ ಬಸ್​ ನಿಲ್ದಾಣಕ್ಕೆ ಬಂದಿದ್ದರು. ಬಸ್​ ಹತ್ತುತ್ತಿದ್ದ ಸಮಯದಲ್ಲಿ ಯಾರೋ ಖದೀಮರು ಇವರ ವ್ಯಾನಿಟಿ ಬ್ಯಾಗ್​ನಲ್ಲಿದ್ದ ಚಿನ್ನಾಭರಣ ದೋಚಿದ್ದಾರೆ ಎನ್ನಲಾಗಿದೆ. ಈ ಕುರಿತು ಸವಣೂರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net