

ಮಮದಾಪುರ: ಗೋಕಾಕ ತಾಲೂಕಿನ ಕೊಳವಿ ಗ್ರಾಮದಲ್ಲಿ ಬಸ್ ತಂಗುದಾಣ ಇಲ್ಲದೆ ಕಳೆದ ಎರಡು ವರ್ಷಗಳಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ. ಗ್ರಾಮದ ಬಸ್ ನಿಲ್ದಾಣದಿಂದ ಸಾರ್ವಜನಿಕರು ಗೋಕಾಕ&ನೇಸರಗಿ ಹಾಗೂ ಬೈಲಹೊಂಗಲ&ಅಂಕಲಗಿ ಮಾರ್ಗವಾಗಿ ಬೆಳಗಾವಿಗೆ ಪ್ರಯಾಣಿಸುತ್ತಿದ್ದಾರೆ.
ಸುತ್ತಮುತ್ತಲಿನ ಗ್ರಾಮಸ್ಥರಿಗೆ ಈ ಬಸ್ ನಿಲ್ದಾಣ ಕೇಂದ್ರಬಿಂದುವಾಗಿದ್ದು ವೃದ್ಧರು, ಗರ್ಭಿಣಿಯರು, ಆಸ್ಪತ್ರೆಗೆ ತೆರಳಬೇಕಾದರೆ ರಸ್ತೆ ಬದಿಯಲ್ಲಿ ನಿಂತುಕೊಳ್ಳುವ ಪರಿಸ್ಥಿತಿ ಇದೆ. ಗೋಕಾಕ ನಗರಕ್ಕೆ ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕಾಲೇಜಿಗೆ ತೆರಳುತ್ತಾರೆ. ಶಾಲಾವಧಿ ಮುಗಿದ ಮೇಲೆ ನಗರಕ್ಕೆ ತೆರಳಲು ತೊಂದರೆಯಾಗುತ್ತಿದ್ದು, ಶ್ರೀ ನೂತನ ಬಸ್ ತಂಗುದಾಣ ನಿರ್ಮಾಣವಾಗಬೇಕೆಂದು
ಸ್ಥಳಿಯರು ಆಗ್ರಹಿಸಿದ್ದಾರೆ.
ಈಗಾಗಲೇ ಸ್ಥಳಿಯ ಶಾಸಕರು ಗ್ರಾಮದ ಬಸ್ ತಂಗುದಾಣಕ್ಕೆ ಅನುಮೋದನೆ ನೀಡಿದ್ದು, ಗುತ್ತಿಗೆದಾರರು ವಿಳಂಬ ಮಾಡುತ್ತಿದ್ದಾರೆ. ಆದಷ್ಟು ಬೇಗ ಗುತ್ತಿಗೆದಾರನನ್ನು ಸಂಪರ್ಕಿಸಿ, ಬಸ್ ತಂಗುದಾಣ ಕಲ್ಪಿಸಿಕೊಡಲಾಗುವುದು.
> ಕರೆಪ್ಪ ಬಡಿಗವಾಡ
ಗ್ರಾಮ ಪಂಚಾಯಿತಿ ಅಧ್ಯಕ್ಷ