ಬಸ್​ ಹತ್ತುತ್ತಿದ್ದಾಗ ಚಿನ್ನಾಭರಣ ಬ್ಯಾಗ್​ ಕಳ್ಳತನ

gold-513062_640
Published on

ಹಾವೇರಿ: ಬಸ್​ ಹತ್ತುತ್ತಿದ್ದ ಮಹಿಳೆಯ ಬ್ಯಾಗ್​ನಲ್ಲಿದ್ದ 2.62 ಲಕ್ಷ ರೂ. ಮೌಲ್ಯದ 67 ಗ್ರಾಂ ತೂಕದ ಚಿನ್ನಾಭರಣ ದೋಚಿದ ಘಟನೆ ನಗರದ ಬಸ್​ ನಿಲ್ದಾಣದಲ್ಲಿ ಗುರುವಾರ ನಡೆದಿದೆ.

ಸವಣೂರ ತಾಲೂಕಿನ ಮಣ್ಣಂಗಿ ಗ್ರಾಮದ ಬೀಬಿ ಅಲ್ಮಾಸ್​ ಹುಸೇನಸಾಬ ವಾಲೀಕಾರ (30) ಎಂಬುವರ ಚಿನ್ನಾಭರಣ ದೋಚಿರುವುದು.

ಇವರು ನಗರದ ಬಸ್​ ನಿಲ್ದಾಣದಲ್ಲಿ ಗುತ್ತಲ-ಹಡಲಗಿ ಬಸ್​ ಹತ್ತುವ ಅಂಕಣದಲ್ಲಿ ನಿಂತು ಬಸ್​ ಹತ್ತುತ್ತಿದ್ದ ಸಮಯದಲ್ಲಿ ಯಾರೋ ಬ್ಯಾಗ್​ನಲ್ಲಿದ್ದ ಚಿನ್ನಾಭರಣ ದೋಚಿದ್ದಾರೆ. ಈ ಕುರಿತು ಶಹರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net