ಚಾಲಕನ ನಿಯಂತ್ರಣ ತಪ್ಪಿ ರಸ್ತೆಬಿಟ್ಟಿಳಿದ ಬಸ್

BKL BUS
Published on

ಭಟ್ಕಳ: ಸಿಗಂದೂರಿನಿಂದ ಭಟ್ಕಳಕ್ಕೆ ಸೋಮವಾರ ಬೆಳಗ್ಗೆ ಬರುತ್ತಿದ್ದ ಸರ್ಕಾರಿ ಬಸ್​ವೊಂದರ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಸ್ ಸಿಗಂದೂರಿನಿಂದ ಹೊರಟು ಭಟ್ಕಳಕ್ಕೆ ಆಗಮಿಸುತ್ತಿತ್ತು. ಹಾಡುವಳ್ಳಿ ಬಳಿ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಈ ಸಂದರ್ಭದಲ್ಲಿ ಚಾಲಕ ಬಸ್ ಅನ್ನು ರಸ್ತೆಯ ಪಕ್ಕಕ್ಕೆ ಚಾಚಿ ಎಲ್ಲರನ್ನೂ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಬಸ್​ನಲ್ಲಿ ಮಾರುಕೇರಿ ಶಿವಶಾಂತಿಕಾ ಪ್ರೌಢಶಾಲೆಗೆ ತೆರಳುವ ವಿದ್ಯಾರ್ಥಿಗಳಿದ್ದರು. ಅಪಘಾತದಲ್ಲಿ ವಿದ್ಯಾರ್ಥಿಗಳಿಗೆ ಗಾಯಗಳಾಗಿಲ್ಲ ಹಾಡುವಳ್ಳಿಯ ನಿವಾಸಿ ಮಹಾಲಕ್ಷ್ಮೀ ನಾಯ್ಕ ಎಂಬುವವರ ತಲೆಗೆ ಸಣ್ಣ ಗಾಯಗಳಾಗಿದ್ದು, ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net