ಬಸ್ ಟಿಕೆಟ್ ದರ ಏರಿಕೆ ಆದೇಶ ಹಿಂಪಡೆಯಲು ಕರವೇ ಪ್ರವೀಣಶೆಟ್ಟಿ ಬಣ ಮನವಿ

270220 Yalaburga Karave Appeal for Bust Fair Hike Withdrawa
Published on

ಯಲಬುರ್ಗಾ: ಸಾರಿಗೆ ಬಸ್ ಟಿಕೆಟ್ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಸಾರಿಗೆ ವ್ಯವಸ್ಥಾಪಕ ರಮೇಶ ಚಿಣಗಿಗೆ ಗುರುವಾರ ಕರವೇ (ಪ್ರವೀಣಶೆಟ್ಟಿ ಬಣ) ವತಿಯಿಂದ ಮನವಿ ಸಲ್ಲಿಸಲಾಯಿತು.

ಘಟಕದ ತಾಲೂಕು ಅಧ್ಯಕ್ಷ ಪ್ರಶಾಂತಗೌಡ ಚನ್ನಪ್ಪಗೌಡರ ಮಾತನಾಡಿ, ರಾಜ್ಯ ಸರ್ಕಾರ ಬಸ್ ದರ ಏರಿಕೆ ಮಾಡಿರುವುದರಿಂದ ರಾಜ್ಯದ ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಾಗರಿಕಗೆ ತೀವ್ರ ತೊಂದರೆಯಾಗುತ್ತಿದೆ. ಶೇ.12 ದರ ಏರಿಕೆಯಿಂದ ಗ್ರಾಮೀಣ ಭಾಗದ ಜನರಿಗೆ ಬರೆ ಎಳೆದಂತಾಗಿದೆ. ಕೂಡಲೇ ಏರಿಕೆ ಆದೇಶ ಹಿಂಪಡೆದು ನಾಗರಿಕರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಪದಾಧಿಕಾರಿಗಳಾದ ಮಹೇಶ ಬಡಿಗೇರ್, ಆದೇಶ ಭೋವಿ, ಶರಣಪ್ಪ ಗಚ್ಚಿನಮನಿ, ಶಿವಕುಮಾರ ಶಿವಪ್ಪಯ್ಯನಮಠ, ಕೊಟೇಶ ಹಳ್ಳಿ, ಅಮೀನ್‌ಖಾಜಿ, ವಿನೋದ ಹೊಂಬಳ, ಶಾನು ಚಂಡಿಹಾಳ, ಅಶ್ರಫ್‌ಅಲಿ ಬುಲ್ಡಿಯಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net