

ಹಟ್ಟಿಚಿನ್ನದಗಣಿ: ಅಧಿಕ ಪ್ರಯಾಣಿಕರಿದ್ದರೂ ಒಂದೇ ಬಸ್ ಬಿಟ್ಟಿರುವ ಸಾರಿಗೆ ಇಲಾಖೆ ಅಸಮರ್ಪಕ ಸೇವೆ ಖಂಡಿಸಿ ಸಮೀಪದ ಗೌಡೂರು ಗ್ರಾಮದಲ್ಲಿ ಶುಕ್ರವಾರ ವಿದ್ಯಾರ್ಥಿಗಳು ಬಸ್ ತಡೆದು ಟೈರ್‌ಗೆ ಬೆಂಕಿ ಹಚ್ಚುವ ಮೂಲಕ ಪ್ರತಿಭಟನೆ ನಡೆಸಿದರು.
ಗೌಡೂರು, ಮಾಚನೂರು, ಯಲಗಟ್ಟಾ ಗ್ರಾಮಗಳಿಂದ ಶಿಕ್ಷಣಕ್ಕಾಗಿ ತಾಲೂಕು ಕೇಂದ್ರಕ್ಕೆ ತೆರಳುವ ನೂರಾರು ವಿದ್ಯಾರ್ಥಿಗಳಿಗೆ ಪ್ರತಿದಿನ ಒಂದಿಲ್ಲೊಂದು ಕಾರಣಗಳಿಂದ ಬಸ್ಸಿನ ಸಮಸ್ಯೆ ಉಂಟಾಗುತ್ತಿದ್ದರಿಂದ ಈ ಹಿಂದೆ ಮನವಿ ಸಲ್ಲಿಸಲಾಗಿತ್ತು.
ವಾರದವರೆಗೂ ಎರಡು ಬಸ್‌ಗಳು ಸಂಚರಿಸಿದ್ದು, ನಂತರ ಯಥಾರೀತಿ ಒಂದೇ ಬಸ್ ಬರುತ್ತಿದೆ. ಇನ್ನಾದರು ಎರಡು ಬಸ್‌ಗಳ ಸೌಕುರ್ಯ ಕಲ್ಪಿಸಬೇಕು ಇಲ್ಲವಾದಲ್ಲಿ ಮುಂದಾಗುವ ಅನಾಹುತಕ್ಕೆ ನಾವು ಜವಬ್ದಾರರಲ್ಲವೆಂದು ಎಚ್ಚರಿಸಿದರು. ಪ್ರತಿಭಟನೆ ತೀವ್ರಗೊಂಡ ಹಿನ್ನಲೆ ಮತ್ತೊಂದು ಬಸ್ ವ್ಯವಸ್ಥೆ ಕಲ್ಪಿಸಿದ್ದರಿಂದ ಪ್ರತಿಭಟನೆ ಕೈ ಬಿಟ್ಟು ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ತೆರಳಿದರು.