ಬಸ್ ನಿಲುಗಡೆಗೆ ಒತ್ತಾಯಿಸಿ ಪ್ರತಿಭಟನೆ

21 GVT 01
ಕೆಕೆಆರ್‌ಟಿಸಿ ಬಸ್‌ಗನ್ನು ನಿಲ್ಲಿಸುವಂತೆ ಒತ್ತಾಯಿಸಿ ಗಂಗಾವತಿ ತಾಲೂಕಿನ ವಡ್ಡರಹಟ್ಟಿಯಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದರು. ಗ್ರಾಪಂ ಸದಸ್ಯ ಮೆಹರಾಜ, ಪ್ರಮುಖರಾದ ಹರನಾಯಕ, ವೆಂಕಟೇಶ ತಳವಾರ, ಲಕ್ಷ್ಮಣ್ ವದ್ದಟ್ಟಿ, ಹನುಂಮತಪ್ಪ, ಯರಿಸ್ವಾಮಿ ಗೌಡ ಇತರರಿದ್ದರು.
Published on

ಗಂಗಾವತಿ: ಕೆಕೆಆರ್‌ಟಿಸಿ ಬಸ್‌ಗಳನ್ನು ನಿಲ್ಲಿಸುವಂತೆ ಒತ್ತಾಯಿಸಿ ತಾಲೂಕಿನ ವಡ್ಡರಹಟ್ಟಿಯಲ್ಲಿ ಗುರುವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಬಸ್ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು.

15ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ವಡ್ಡರಹಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಗಂಗಾವತಿ ಅವಲಂಬಿಸಿದ್ದಾರೆ. ಕೊಪ್ಪಳ, ವೆಂಕಟಗಿರಿ ಮಾರ್ಗವಾಗಿ ಬರುವ ಕೆಕೆಆರ್‌ಟಿಸಿ ಬಸ್‌ಗಳು ಗ್ರಾಮದಲ್ಲಿ ನಿಲುಗಡೆ ಮಾಡದಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ವಿದ್ಯಾರ್ಥಿಗಳೊಂದಿಗೆ ಪ್ರತಿಭಟಿಸಿದರು. ಬಸ್ ತಡೆದಿದ್ದರಿಂದ ಸಂಚಾರಕ್ಕೆ ತೊಂದರೆಯಾಗಿತ್ತು. ಕೊಪ್ಪಳ, ಯಲಬುರ್ಗಾ, ಕುಷ್ಟಗಿ, ಕೂಕನೂರು ಸಂಪರ್ಕದ ಬಸ್‌ಗಳ ನಿಲುಗಡೆಗೆ ಅವಕಾಶವಿದ್ದರೂ, ಚಾಲಕರು ಸ್ಪಂದಿಸುತ್ತಿಲ್ಲ.

ಎಲ್ಲ ಬಸ್‌ಗಳು ಭರ್ತಿಯಾಗಿ ಬರುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಖಾಸಗಿ ವಾಹನಗಳ ಚಾರ್ಜ್ ದುಬಾರಿಯಾಗಿದೆ ಆದರೂ ಅದರಲ್ಲೆ ತಿರುಗಾಡುವ ಸ್ಥಿತಿ ಬಂದಿದೆ. ಇತ್ತೀಚಿಗೆ ನಡೆದ ಜನಸಂಪರ್ಕ ಸಭೆಯಲ್ಲಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಪ್ರಮುಖರಾದ ಶಿವರಾಜ ಡಂಬರ್, ಹುಲಗಪ್ಪ ಸಿರವಾರ, ಬಾರೀಮ್ ಸಾಬ್, ದಾವಲ್ ಸಾಬ್ ಮುಲ್ಲಾರ್, ಯಮನೂರಪ್ಪ, ನೀಲಪ್ಪ ದೋಟಿಹಾಳ, ಹನುಮೇಶ ಬಳ್ಳಾರಿ, ಖಾಸೀಂಸಾಬ್ ಕೃಷ್ಣಾಪುರ ಇತರರಿದ್ದರು.

----------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net