ಬಸ್ ತಂಗುದಾಣ ಸ್ವಚ್ಛತಾ ಕಾರ್ಯಕ್ರಮ

blm (4)
Published on

ಕಾರ್ಕಳ: ಸಾರ್ವಜನಿಕ ಹಿಂದು ರುದ್ರ ಭೂಮಿ ವ್ಯವಸ್ಥಾಪನಾ ಸಮಿತಿ ಕರಿಯಕಲ್ಲು ಹಾಗೂ ರೋಟರಿ ಕ್ಲಬ್ ಕಾರ್ಕಳ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಜೋಡುಕಟ್ಟೆ, ಪುಲ್ಕೇರಿ ಬೈಪಾಸ್, ಕುಂಟಲ್ಪಾಡಿ, ಆನೆಕೆರೆ, ಅನಂತಶಯನ, ಮಾರ್ಕೆಟ್ ಎಸ್.ವಿ.ಟಿ ವೃತ್ತ, ಕಾಬೆಟ್ಟು, ಕುಕ್ಕುಂದೂರು ಜಯಂತಿನಗರ, ಬಂಡಿಮಠ ಮೊದಲಾದ ಕಡೆಗಳಲ್ಲಿ ಬಸ್ಸು ತಂಗುದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಜರುಗಿತು. ಕರಿಯಕಲ್ಲು ಹಿಂದು ರುದ್ರಭೂಮಿ ವ್ಯವಸ್ಥಾಪನಾ ಸಮಿತಿ ಸಂಚಾಲಕ ಪ್ರಕಾಶ್ ರಾವ್, ರೋಟರಿ ಕ್ಲಬ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಕಾರ್ಯದರ್ಶಿ ಚೇತನ್ ನಾಯ್ಕ, ಇಕ್ಬಾಲ್ ಅಹಮ್ಮದ್, ಸುರೇಶ್ ನಾಯಕ್, ಬಾಲಕೃಷ್ಣ ದೇವಾಡಿಗ, ಹರಿಪ್ರಕಾಶ್ ಶೆಟ್ಟಿ, ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗ, ಹಿರಿಯ ಆರೋಗ್ಯ ನಿರೀಕ್ಷಕಿ ಲೈಲಾ ಥೋಮಸ್, ಸಂತೋಷ್ ರಾವ್, ಉದ್ಯಮಿ ಸುರೇಶ್ ಕೋಟ್ಯಾನ್, ನಾಗೇಶ್ ರಾವ್, ಸತೀಶ್ ರಾವ್, ಧೀರಜ್ ರಾವ್, ಆದಿತ್ಯ ರಾವ್, ವಿನೀತ್ ರಾವ್, ಭುವನ್, ಕಿಯಾನ್, ವಿಘ್ನೇಶ್ ರಾವ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net