ಬಸ್ ನಿಲ್ದಾಣ ನಿರ್ಮಾಣಕ್ಕೆ ಅನುಮತಿಸಿ

06 KAMPLI 01
ಕಂಪ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ(ಪಕ್ಷಾತೀತ) ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣಗೆ ಮನವಿ ಸಲ್ಲಿಸಿತು. ಅಧ್ಯಕ್ಷ ಜಿ.ಜಿ.ಚಂದ್ರಣ್ಣ ಪ್ರಮುಖರಾದ ಕರೇಕಲ್ ಮನೋಹರ, ಬಿ.ನಾಗೇಂದ್ರ, ಎ.ಹನುಮಂತ, ರಜಾಕ್, ಮೌಲಾ ಇತರರಿದ್ದರು.
Published on

ಕಂಪ್ಲಿ: ಡಾ.ಅಂಬೇಡ್ಕರ್ ವೃತ್ತ ಹತ್ತಿರ ಬಸ್ ತಂಗುದಾಣ ಸ್ಥಾಪನೆ ಅಥವಾ ಹಳೆ ಬಸ್ ನಿಲ್ದಾಣ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ (ಪಕ್ಷಾತೀತ)ದ ಸದಸ್ಯರು ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ಮಂಗಳವಾರ ಮನವಿ ಸಲ್ಲಿಸಿದರು.

ಒಕ್ಕೂಟದ ಅಧ್ಯಕ್ಷ ಜಿ.ಜಿ.ಚಂದ್ರಣ್ಣ ಮಾತನಾಡಿ, ಹಳೆ ಬಸ್‌ನಿಲ್ದಾಣದಲ್ಲಿ ಸರಿಯಾಗಿ ಬಸ್ ನಿಲ್ಲಲು ಜಾಗವಿಲ್ಲ. ಇನ್ನೂ ಅಂಬೇಡ್ಕರ್ ವೃತ್ತ ಬಳಿ ಪುನೀತ್‌ರಾಜಕುಮಾರ್ ತಂಗುದಾಣ ಎದುರು ಹೊಸಪೇಟೆಗೆ ತೆರಳಲು ಪ್ರಯಾಣಿಕರು ಗಾಳಿ, ಮಳೆ, ಬಿಸಿಲಿಗೆ ರಸ್ತೆಯ ಮೇಲೆ ನಿಲ್ಲಬೇಕಾಗಿದೆ.

ಬಸ್ ನಿಲ್ದಾಣ ನಿರ್ಮಿಸುವಂತೆ ಪುರಸಭಾಡಳಿತಕ್ಕೆ 2019ರಿಂದ ಇಲ್ಲಿವರೆಗೆ ಸುಮಾರು ಐದಾರು ಬಾರಿ ಮನವಿ ಸಲ್ಲಿಸಿದರು ಕ್ಯಾರೆ ಎನ್ನುತ್ತೀಲ್ಲ. ಪುನೀತ್‌ರಾಜಕುಮಾರ್ ತಂಗುದಾಣ ನಿರ್ಮಿಸಿದ ಜೈನ್ ಸೇವಾ ಟ್ರಸ್ಟ್, ಈಗ ಎದುರುಗಡೆ ಇನ್ನೊಂದು ನಿಲ್ದಾಣವನ್ನು ನಿರ್ಮಿಸಿಕೊಡಲು ತಯಾರಿದ್ದರೂ, ಪುರಸಭಾಡಳಿತ ಅನುಮತಿ ನೀಡುತ್ತಿಲ್ಲ.

ಕಾರ್ಯಪ್ರವೃತ್ತರಾಗಿ ಬಸ್ ತಂಗುದಾಣ ನಿರ್ಮಿಸಬೇಕು ಅಥವಾ ಅನುಮತಿಸಬೇಕು. ಉದಾಸೀನ ತೋರಿದಲ್ಲಿ ಪುರಸಭೆ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮನವಿ ಸಲ್ಲಿಕೆ: ತುಂಗಭದ್ರಾ ನದಿ ಸೇತುವೆ ಬಲವರ್ಧಿಸುವ ಕಾಮಗಾರಿ ಕೈಗೊಳ್ಳಬೇಕು. ಸೇತುವೆ ಮೇಲೆ ಪಾದಚಾರಿ, ಲಘುವಾಹನ, ಬಸ್‌ಗಳ ಓಡಾಟಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಅಧಿಕ ಬಾರದ ವಾಹನಗಳ ನಿಯಂತ್ರಣಕ್ಕೆ ಕಾವಲುಗಾರನನ್ನು ನೇಮಿಸಬೇಕು.

ನದಿ ಬಳಿ ಹೈಟ್ ಆರೆಸ್ಟ್ ಕಮಾನ್ ನಿರ್ಮಿಸಬೇಕು ಎಂದು ಒತ್ತಾಯಿಸಿ ಗಂಗಾವತಿ ಪಿಡಬ್ಲ್ಯೂಡಿ ಎಇಇ ಜೆ.ವಿಶ್ವನಾಥಗೆೆ ಒಕ್ಕೂಟದ ಸದಸ್ಯರು ಮನವಿ ಸಲ್ಲಿಸಿದರು. ಸದಸ್ಯರಾದ ಕರೇಕಲ್ ಮನೋಹರ, ಬಿ.ನಾಗೇಂದ್ರ, ಎ.ಹನುಮಂತ, ರಜಾಕ್, ಮೌಲಾ, ಎಂ.ಗೋಪಾಲ್, ಬಿ.ದೇವೇಂದ್ರ, ಬಿ.ಕೆ.ವಿರುಪಾಕ್ಷಿ, ವಿ.ವೆಂಕಟರಮಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net