ಬಸ್ ತಂಗುದಾಣವಲ್ಲ ಕುಡುಕರ ತಾಣ!

bus
filter: 0; fileterIntensity: 0.0; filterMask: 0; module: h; hw-remosaic: 0; touch: (-1.0, -1.0); modeInfo: ; sceneMode: SFHDR; cct_value: 0; AI_Scene: (-1, -1); aec_lux: 145.13705; hist255: 0.0; hist252~255: 0.0; hist0~15: 0.0;
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಸೂಲಿಬೆಲೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಳಿ ನಿರ್ಮಾಣವಾಗಿರುವ ಬಸ್ ತಂಗುದಾಣವು ಪ್ರಯಾಣಿಕಕರ ಉಪಯೋಗಕ್ಕಿಂತ ಮದ್ಯವ್ಯಸನಿಗಳಿಗೆ ತುಂಬಾ ಅನುಕೂಲವಾಗಿದೆ, ಬಸ್ ತಂಗುದಾಣ ಕುಡುಕರ ತಾಣವಾಗಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಸೂಲಿಬೆಲೆ-ವಿಜಯಪುರ ರಸ್ತೆಯಲ್ಲಿರುವ ಸರ್ಕಾರಿ ರೇಷ್ಮೆ ಬಿತ್ತನೆ ಕೋಠಿ ಮುಂಭಾಗ ನಿರ್ಮಿಸಲಾಗಿರುವ ಈ ತಂಗುದಾಣವು ಸ್ವಾತಂತ್ರ್ಯ ಹೋರಾಟಗಾರಾದ ದಿ. ಸೂ.ರಂ.ರಾಮಯ್ಯ ಅವರ ಜ್ಞಾಪಕಾರ್ಥವಾಗಿ ಸೂಲಿಬೆಲೆ ಸರ್ಕಾರಿ ಪ್ರಥಮ ದರ್ಜೆ (ಡಿಗ್ರಿ) ಕಾಲೇಜಿನ ಮಕ್ಕಳಿಗೆ ಹಾಗೂ ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಲಾಗಿದೆ. ಈ ಜಾಗದಲ್ಲಿ ಕಿಡಿಗೇಡಿಗಳು ಗುಟ್ಕಾ ತಿಂದು ಎಲ್ಲೆಂದರಲ್ಲಿ ಉಗಿದು ಬಸ್ ನಿಲ್ದಾಣದ ಪರಿಸರವನ್ನು ಹಾಳು ಮಾಡಿದ್ದಾರೆ ಸದಾ ಕಾಲಾ ಮದ್ಯವ್ಯಸನಿಗಳು ಮಲಗುವ ಸ್ಥಳವಾಗಿ ರೂಪುಪಡೆದಿದೆ.

ಸಂಜೆ ವೇಳೆ ಮದ್ಯಗೋಷ್ಟಿ: ಸಂಜೆ 6 ಗಂಟೆ ನಂತರ ಬಸ್ ತಂಗುದಾಣದಲ್ಲಿ ರಾಜರೋಷವಾಗಿ ಮದ್ಯಪಾನ ಮಾಡಲು ಶುರು ಮಾಡುತ್ತಾರೆ ಅಲ್ಲದೇ ಇಲ್ಲಿ ಕುಡಿದ ಬಾಟಲಿಗಳು, ಮದ್ಯದ ಟೆಟ್ರಾಪಾಕೇಟುಗಳು ಹಾಗೂ ನೀರಿನ ಬಾಟಲಿಗಳನ್ನು ಬಿಸಾಡಿ ಹೋಗುತ್ತದ್ದಾರೆ ಇದರಿಂದ ಬಸ್ ತಂಗುದಾಣ ಉಪಯೋಗಕ್ಕೆ ಬಾರದಂತೆ ಮಾಡಿದ್ದಾರೆ ಇಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್ ತಂಗುದಾಣ ಗಬ್ಬು ನಾರುತ್ತಿರುವ ಕಾರಣ ಬಿಸಲಿನಲ್ಲಿ ಬಸ್ಸಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಿದ್ಯಾರ್ಥಿನಿಯರಿಗೆ ಮುಜುಗರ: ಬಸ್ ತಂಗುದಾಣದ ಬಳಿ ಬರುವ ವಿದ್ಯಾರ್ಥಿನಿಯರು ಕುಡುಕರ ಕಿರಿಕಿರಿಗೆ ತೀವ್ರ ಮುಜುಗರ ಎದುರಿಸುವಂತಾಗಿದೆ. ಚುಡಾಯಿಸುವುದು ರೇಗಿಸುವುದು ಪ್ರಶ್ನಿಸಿದರೆ ಜಗಳ ಮಾಡುವುದು ನಡೆಯುತ್ತಿರುತ್ತದೆ. ಎಷ್ಟೋ ಬಾರಿ ಬುದ್ದಿ ಹೇಳಲು ಹೋದ ಹಿರಿಯ ನಾಗರೀಕರ ಮೇಲೆ ಕುಡುಕರು ಮುಗಿಬೀಳುವ ದೃಶ್ಯಗಳು ಸಾಮಾನ್ಯವಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ನೆನಪಿನಾರ್ಥ ನಿರ್ಮಿಸಿರುವ ಈ ತಂಗುದಾಣ ಕುಡುಕರ ತಾಣವಾಗಿರುವುದು ನಿಜಕ್ಕೂ ದುರಂತ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇಲ್ಲಿ ಸಂಜೆ 6 ಗಂಟೆಯ ನಂತರ ಪೋಲಿಸರು ಗಸ್ತು ನಡೆಬೇಕು, ನೈರ್ಮಲ್ಯ ಹಾಳು ಮಾಡುತ್ತಿರುವ ಕುಡುಕರಿಗೆ ಎಚ್ಚರಿಕೆ ನೀಡಬೇಕು ಬಸ್ ನಿಲ್ದಾಣದ ಸ್ವಚ್ಛ್ಚತೆ ಕಾಪಾಡಲು ಸಹಕಾರ ನೀಡಬೇಕು.

ಎಂ.ಆರ್.ಉಮೇಶ್, ಜಿಲ್ಲಾಧ್ಯಕ್ಷ, ರಾಜ್ಯ ವೈಜ್ಞಾನಿಕ ಪರಿಷತ್.

----

ಇತ್ತೀಚಿಗೆ ಈ ಬಸ್ ತಂಗುದಾಣದಲ್ಲಿ ನಿಲ್ಲಲೂ ವಾಕರಿಕೆ ಬರುತ್ತದೆ ಮದ್ಯದ ಬಾಟಲಿಗಳ ಜತೆಯಲ್ಲಿ ಗುಟ್ಕಾ ಸೇವಿಸಿ ಉಗಳಿರುತ್ತಾರೆ ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಈ ಬಗ್ಗೆ ಸ್ಥಳೀಯ ಪೋಲಿಸರು ತುರ್ತು ಕ್ರಮ ಜರುಗಿಸಬೇಕಾಗಿದೆ.

ಮುರುಳಿ, ಪದವಿ ವಿದ್ಯಾರ್ಥಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net