ಪೊದೆಗಳಿಂದಾವೃತ ಬಸ್‌ನಿಲ್ದಾಣ: ವಿಷಜಂತುಗಳ ಭಯ, ಚಿರತೆ ಆತಂಕ : ಪಡುಪಣಂಬೂರಲ್ಲಿ ಸಮಸ್ಯೆ

hullu
Published on

ವಿಜಯವಾಣಿ ಸುದ್ದಿಜಾಲ ಮೂಲ್ಕಿ ರಾಷ್ಟ್ರೀಯ ಹೆದ್ದಾರಿ 66ರ ಪಡುಪಣಂಬೂರು ಗ್ರಾಮ ಪಂಚಾಯಿತಿ ಎದುರು ಪೂರ್ವ ಭಾಗದ ರಸ್ತೆಯಲ್ಲಿ ಲಯನ್ಸ್ ಕ್ಲಬ್ ಹಾಗೂ ಸ್ಥಳೀಯ ದಾನಿಗಳಿಂದ ನಿರ್ಮಿಸಲಾದ ಬಸ್ಸು ನಿಲ್ದಾಣ ಹುಲ್ಲು ಗಿಡಗಂಟಿಗಳಿಂದ ಆವೃತವಾಗಿದ್ದು ಜನ ಸಾಮಾನ್ಯರಿಗೆ ಸಮಸ್ಯೆಯಾಗಿದೆ. ಮಂಗಳೂರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಪೂರ್ವ ಭಾಗದಲ್ಲಿರುವ ಈ ನಿಲ್ದಾಣ ಕಿನ್ನಿಗೋಳಿ, ತೋಕೂರು ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಸೇರುವ ಮುಖ್ಯ ರಸ್ತೆಯಾಗಿದ್ದು, ಮಂಗಳೂರು ಕಡೆಗೆ ಬಸ್ಸು ಹಿಡಿಯಲು ಬರುವವರಿಗೆ ಈ ನಿಲ್ದಾಣವೇ ಆಸರೆ. ಪಕ್ಕದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಇದ್ದು, ಶಾಲಾ ಮಕ್ಕಳು ಇದೇ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿರುತ್ತಾರೆ. ಮಧ್ಯಾಹ್ನ ಬಿಸಿಲಿಗೆ ದ್ವಿಚಕ್ರ ಹಾಗೂ ನಡೆದು ಬರುವ ಪ್ರಯಾಣಿಕರು ಕೂಡ ಇಲ್ಲಿ ವಿಶ್ರಮಿಸುವುದಿದೆ. ಈ ನಿಲ್ದಾಣವನ್ನು ಹುಲ್ಲು ಪೊದೆಗಳು ಆಕ್ರಮಿಸಿರುವುದರಿಂದ ವಿಷ ಜಂತುಗಳ ಭಯ ಹೆಚ್ಚಾಗಿದೆ. ಮೂಲ್ಕಿ ಪರಿಸರದಲ್ಲಿ ಎಲ್ಲೆಡೆ ಚಿರತೆಗಳು ಕಾಣ ಸಿಗುತ್ತಿದ್ದು, ಪಡುಪಣಂಬೂರು ಪರಿಸರವೂ ಹೊರತಾಗಿಲ್ಲ. ಈ ಬಗ್ಗೆ ಸ್ಥಳೀಯ ಜನ ಪ್ರತಿನಿಧಿಗಳು ಅಥವಾ ಸೇವಾ ಸಂಸ್ಥೆಗಳು ಗಮನ ಹರಿಸಬೇಕು ಎನ್ನುವುದು ನಾಗರೀಕರ ಆಗ್ರಹ.

ಬಸ್ಸು ನಿಲ್ದಾಣ ಸುತ್ತ ಹುಲ್ಲು ಪೊದೆಗಳು ಇರುವುದರಿಂದ ಮಧ್ಯಾಹ್ನದ ಸಮಯದಲ್ಲಿ ಹಾವುಗಳು ಹರಿದು ಬರುತ್ತವೆ. ಮಕ್ಕಳು ಹಿರಿಯರು ನಡೆದಾಡುವ ನಿಲ್ದಾಣವಾಗಿರುವುದರಿಂದ ವಿಷ ಜಂತುಗಳ ಕಡಿತಕ್ಕೆ ಒಳಗಾಗುವ ಭೀತಿ ಹೆಚ್ಚಾಗಿದೆ. ನರಸಿಂಹ ಕೆರೆಕಾಡು ಸ್ಥಳೀಯರು. https://www.vijayavani.net/state-level-workshop-at-mulki-vijaya-college https://www.vijayavani.net/naxal-leader-appears-in-court

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net