

ಮಾಸ್ತಿ: ಮಾಸ್ತಿ ಗ್ರಾಮದ ಬಸ್ ನಿಲ್ದಾಣವನ್ನು ಗುಣಮಟ್ಟದಿಂದ ನಿರ್ಮಿಸಲಾಗಿದ್ದು, ಶ್ರೀ ಉದ್ಘಾಟನೆ ಮಾಡಲಾಗುವುದು. 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಡಾ.ಮಾಸ್ತಿ ವೆಂಕಟೇಶ ಅಯ್ಯಾಂಗರ್ ಬಸ್ ನಿಲ್ದಾಣವನ್ನು ಡಿ.25ರಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟನೆ ಮಾಡಬೇಕಿತ್ತು. ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.
ಮಾಲೂರು ತಾಲೂಕು ಮಾಸ್ತಿ ಗ್ರಾಮದಲ್ಲಿ ಭಾನುವಾರ ಬಸ್ ನಿಲ್ದಾಣ ವೀಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಬಾರಿಗೆ ಶಾಸಕನಾದಾಗ ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹೆಸರಿನಲ್ಲಿ ವಸತಿ ಶಾಲೆ ನಿರ್ಮಿಸಬೇಕೆಂಬ ಆಶಯದಂತೆ ಕೆಸರಗೆರೆ ಬಳಿ 8 ಎಕರೆಯಲ್ಲಿ 25 ಕೋಟಿ ರೂ.ವೆಚ್ಚದಲ್ಲಿ ವಸತಿ ಶಾಲೆ ನಿರ್ಮಿಸಲಾಗಿದ್ದೂ ಅದೂ ಉದ್ಘಾಟನೆಗೆ ಸಿದ್ಧವಾಗಿದೆ ಎಂದರು.
ಮಾಸ್ತಿಯನ್ನು ಪಟ್ಟಣ ಪಂಚಾಯಿತಿಯಾಗಿ, ವಾಣಿಜ್ಯ ಕೇಂದ್ರವಾಗಿ ಮಾಡಿ ಗ್ರಾಪಂಗೆ ಆದಾಯ ಬರುವಂತೆ ಮಾಡಬೇಕು. ಸಾರ್ವಜನಿಕರಿಗೆ ಎಲ್ಲ ರೀತಿಯ ವಸ್ತುಗಳು ದೊರೆಯುವಂತೆ ಮಾಡಬೇಕು. ಆಗ ಹೆಚ್ಚಿನ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯಿತಿಯನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತೇನೆ ಎಂದರು.
ಜನರ ಮನವಿಯಂತೆ ಮಾಸ್ತಿಗೆ ಬೆಂಗಳೂರು, ಕೋಲಾರ, ಸರ್ಜಾಪುರದಿಂದ ನಿತ್ಯ ಬಸ್ ಸೌಲಭ್ಯ ಮತ್ತು ಬಿಎಂಟಿಸಿ ಬಸ್ ಬೇಕೆಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಬಸ್ ನಿಲ್ದಾಣದಲ್ಲಿ ಶೌಚಗೃಹ ನಿರ್ಮಾಣ ಮಾಡಲಾಗಿದೆ. ಗ್ರಾಪಂಗೆ ಹಸ್ತಾಂತರ ಮಾಡಿದ ನಂತರ ನಿರ್ವಹಣೆ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ಗ್ರಾಪಂ ಕಾರ್ಯದರ್ಶಿ ರಮೇಶ್ಗೆ ಸೂಚಿಸಿದರು.
ಮಾದರಿ ಬಸ್ ನಿಲ್ದಾಣದ ಗೋಡೆಗಳ ಮೇಲೆ, ವಸತಿ ಶಾಲೆ, ಶಿಲ್ಪಿ ಗ್ರಾಮ ಶಿವಾರಪಟ್ಟಣ, ಮಾಲೂರು ದೊಡ್ಡ ಕೆರೆ ಸೇರಿ ವಿವಿಧೆಡೆ ತಾಲೂಕಿನ ಇತಿಹಾಸ ಹೊಂದಿರುವ ಸ್ಥಳಗಳ ಚಿತ್ರ ಬರೆಸುವ ಮೂಲಕ ಆಕರ್ಷಣೀಯವಾಗಿ ಮಾಡಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಮುಖಂಡರಾದ ನಾಗರಾಜ್, ದಿನ್ನಹಳ್ಳಿ ರಮೇಶ್, ಎಂ.ವಿ.ನಾಗಾರಾಜ್, ಅಮರ ನಾರಾಯಣ, ಶೆಟ್ಟಹಳ್ಳಿ ರಾಮಮೂರ್ತಿ, ಎಸ್.ಮುನಿಯಪ್ಪ, ಕೆ.ಎನ್.ಮುನಯ್ಯ, ಕೆ.ವಿ.ಪ್ರವಿಣ್ಕುಮಾರ್ ಇದ್ದರು.
ನಿರ್ಮಿತಿ ಕೇಂದ್ರದ ಇಂಜಿನಿಯರ್ ಕಾರ್ತಿಕ್, ಗ್ರಾಪಂ ಕಾರ್ಯದರ್ಶಿ ರಮೇಶ್, ಕೆಪಿಎಸ್ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಕ್ರಂಪಾಷಾ, ಮುಖಂಡರಾದ ಶೌಕತ್, ಸಬ್ದರ್ಬೇಗ್, ಶೇಕ್ಇಮ್ರಾನ್, ಫಯಾಜ್ ಅಹಮ್ಮದ್ ಇದ್ದರು.