ಹೈದರಾಬಾದ್​ಗೆ ಬಸ್​ ಸೇವೆ ಆರಂಭ

ksrtc
Published on

ಬೆಂಗಳೂರು: ಲಾಕ್​ಡೌನ್​ ಸಡಿಲಿಕೆ ಹಿನ್ನೆಯಲ್ಲಿ ಕೆಎಸ್ಸಾಟಿರ್ಸಿ ಬೆಂಗಳೂರು ಮತ್ತು ಮೈಸೂರಿನಿಂದ ತೆಲಂಗಾದ ಹೈದರಾಬಾದ್​ಗೆ ನ.3ರಿಂದ ಬಸ್​ ಸೇವೆ ಪುನರಾರಂಭಿಸುತ್ತಿದೆ.

ಲಾಕ್​ಡೌನ್​ ಹಿನ್ನೆಲೆಯಲ್ಲಿ ಕೆಎಸ್ಸಾಟಿರ್ಸಿ ಮಾರ್ಚ್​, ಏಪ್ರಿಲ್​, ಮೇ ತಿಂಗಳುಗಳಲ್ಲಿ ಅಂತಾರಾಜ್ಯ ಬಸ್​ ಸೇವೆ ಸ್ಥಗಿತಗೊಳಿಸಿತ್ತು. ಲಾಕ್​ಡೌನ್​ ಸಡಿಲಿಕೆ ನಂತರ ರಾಜ್ಯ ಸರ್ಕಾರದ ಅನುಮತಿ ಮೇರೆಗೆ ಬಸ್​ ಸೇವೆ ಮತ್ತೆ ಆರಂಭಿಸಲಾಗಿತ್ತು. ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಆಂಧ್ರಪ್ರದೇಶ, ಗೋವಾ, ಕೇರಳ, ಪಾಂಡಿಚೇರಿ ಸೇರಿ ಅಕ್ಕಪಕ್ಕದ ರಾಜ್ಯಗಳಿಗೆ ಬಸ್​ ಸೇವೆ ನೀಡಲಾಗುತ್ತಿದೆ. ಆದರೂ, ಹೈದರಾಬಾದ್​ ಸೇವೆ ಇನ್ನಿತರ ನಗರಗಳಿಗೆ ಬಸ್​ ಸೇವೆ ಆರಂಭಿಸಿರಲಿಲ್ಲ. ಇದೀಗ ನ. 3ರಿಂದ ಹೈದರಾಬಾದ್​ಗೆ ಬಸ್​ ಸೇವೆ ಮತ್ತೆ ಆರಂಭಿಸಲು ನಿರ್ಧರಿಸಲಾಗಿದೆ.

ಅದರಂತೆ ಬಸ್​ ಪ್ರಯಾಣ ಮಾಡುವವರು ಕಡ್ಡಾಯವಾಗಿ ಮಾಸ್ಕ್​ ಧರಿಸುವುದು, ಥರ್ಮಲ್​ ಸ್ಕ್ರೀನಿಂಗ್​ಗೆ ಒಳಗಾಗಬೇಕಿದೆ. ಜತೆಗೆ ನಿಗಮದ ಜಾಲತಾಣ, ಫ್ರಾಂಚೈಸಿ, ಟಿಕೆಟ್​ ಬುಕ್ಕಿಂಗ್​ ಕೇಂದ್ರಗಳಲ್ಲಿ ಮುಂಗಡ ಟಿಕೆಟ್​ ಕಾಯ್ದಿರಿಸಿ ಬಸ್​ ಪ್ರಯಾಣ ಮಾಡಬೇಕು ಎಂದು ಕೆಎಸ್ಸಾಟಿರ್ಸಿ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net