

ಗೊಳಸಂಗಿ: ಕೊಲ್ಹಾರ ತಾಲೂಕಿನ ಮಸೂತಿ ಗ್ರಾಮದಿಂದ ಬಾಗಲಕೋಟೆ ಪಟ್ಟಣಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪುನರಾರಂಭಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕಳೆದ ಬುಧವಾರ ಪೂಜೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದರು.
ಮಸೂತಿ ಗ್ರಾಮದಿಂದ ಬಾಗಲಕೋಟೆ ನಗರಕ್ಕೆ ಪ್ರತಿನಿತ್ಯ ಸಂಚರಿಸುತ್ತಿದ್ದ ಬಸ್ ಕರೊನಾ ವೇಳೆ ಬಂದಾಗಿತ್ತು. ಪೂಜೆ ವೇಳೆ ಪ್ರಮುಖರಾದ ಎಸ್.ಎಸ್.ಗೌರಿಮಠ, ವಿಶ್ವನಾಥ ಹಿರೇಮಠ, ಪಿ.ವಿ.ಪಾಟೀಲ, ಪ್ರಕಾಶ ಕಾಗಲ್, ಕಾಳು ಕುಂಬಾರ, ಈರಪ್ಪ ಅಗಸರ, ಗುರುಸಿದ್ದಪ್ಪ ರಾಂಪುರ, ಗುರು ಹಿರೇಮಠ, ಮುತ್ತು ಬಬಲೇಶ್ವರ, ಶ್ರೀಶೈಲ ಹಂಗರಗಿ, ಮೋಹನಗೌಡ ಪಾಟೀಲ, ಸಂತೋಷ ಬೀಳಗಿ, ಶಿವಪ್ಪ ಹಂಗರಗಿ ಇತರರಿದ್ದರು.
ಪ್ರತಿದಿನ ಬೆಳಗ್ಗೆ 6.15ಕ್ಕೆ ಮಸೂತಿ ಗ್ರಾಮದಿಂದ ಹೊರಡುವ ಬಸ್ ಮಲಘಾಣ, ಚಿಕ್ಕ ಆಸಂಗಿ, ನಾಗರದಿನ್ನಿ, ಮಟ್ಟಿಹಾಳ ಕ್ರಾಸ್, ಕೊಲ್ಹಾರ ಯುಕೆಪಿ, ಬಾಡಗಂಡಿ, ಬೀಳಗಿ, ಬೀಳಗಿ ಕ್ರಾಸ್, ಅನಗವಾಡಿ, ಗದ್ದನಕೇರಿ ಕ್ರಾಸ್, ವಿದ್ಯಾಗಿರಿ, ಇಂಜಿನಿಯರಿಂಗ್ ಕಾಲೇಜು, ನವನಗರ ಮಾರ್ಗವಾಗಿ 8.15ಕ್ಕೆ ಬಾಗಲಕೋಟೆ ತಲುಪುತ್ತದೆ.
ಪುನ@ ಸಂಜೆ 6 ಗಂಟೆಗೆ ಬಾಗಲಕೋಟೆಯಿಂದ ಹೊರಟು ರಾತ್ರಿ 8 ಗಂಟೆಗೆ ಮಸೂತಿ ಗ್ರಾಮಕ್ಕೆ ಆಗಮಿಸಿ ವಾಸ್ತವ್ಯ ಮಾಡಲಿದೆ.