ಹೆಚ್ಚು ಹಣ ಸುಲಿಗೆ ಮಾಡುತ್ತಿದ್ದ 2 ಬಸ್ ವಶ

hosur bus 15
ಹೊಸೂರಿನಲ್ಲಿ ಅಧಿಕಾರಿಗಳು ಬಸ್‌ಗಳ ತಪಾಸಣೆ ಮಾಡಿದರು.
Published on

ಹೊಸೂರು: ಓಣಂ ಹಬ್ಬಕ್ಕೆ ತೆರಳುವ ಪ್ರಯಾಣಿಕರಿಂದ ಹೆಚ್ಚಿನ ಹಣ ತೆಗೆದುಕೊಳ್ಳುತ್ತಿದ್ದ ಹಾಗೂ ಪರವಾನಗಿ ಇಲ್ಲದೆ ಓಡಾಡುತ್ತಿದ್ದ ಎರಡು ಬಸ್‌ಗಳನ್ನು ಚೆನ್ನೈ ಆರ್‌ಟಿಒ ಜಂಟಿ ನಿರ್ದೇಶಕ ಸುರೇಶ್ ನೇತೃತ್ವದಲ್ಲಿ ಅಧಿಕಾರಿಗಳು ನಗರದ ಬಸ್ ನಿಲ್ದಾಣದಲ್ಲಿ ವಶಕ್ಕೆ ಪಡೆದರು.
ಬೆಂಗಳೂರಿನಿಂದ ತಮಿಳುನಾಡು ಹಾಗೂ ಕೇರಳಕ್ಕೆ ಓಣಂ ಹಬ್ಬಕ್ಕೆ ತೆರಳುವ ಪ್ರಯಾಣಿಕರಿಂದ ಮನಸಿಗೆ ಬಂದಂತೆ ಟಿಕೆಟ್ ವಸೂಲಿ ಮಾಡಿ ಬಸ್‌ಗಳನ್ನು ಓಡಿಸಲಾಗುತ್ತಿತ್ತು ಎಂಬ ಮಾಹಿತಿ ಮೇರೆಗೆ ಬೆಂಗಳೂರಿನಿಂದ ಬರುವ ಎಲ್ಲ ಸ್ಲೀಪರ್ ಬಸ್‌ಗಳನ್ನು ನಗರದಲ್ಲಿ ತಪಾಸಣೆ ನಡೆಸಿದಾಗ ಕೇರಳದ ಕೊಟ್ಟಾಯಂಗೆ ಹೋಗುತ್ತಿದ್ದ ಎರಡು ಬಸ್‌ಗಳ ಪರವಾನಗಿ ಇಲ್ಲದೆ ಇರುವುದು ಖಚಿತವಾಗಿದೆ. ಅಲ್ಲದೆ ಈ ಬಸ್‌ಗಳು ಒಂದು ವರ್ಷದಿಂದ ಯಾವುದೇ ತೆರಿಗೆ ಪಾವತಿಸಿಲ್ಲ ಎಂಬುದೂ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ವಶಕ್ಕೆ ಪಡೆದ ಬಸ್‌ಗಳಲ್ಲಿದ್ದ ಪ್ರಯಾಣಿಕರಿಗೆ ಬೇರೆ ಬಸ್‌ಗಳ ವ್ಯವಸ್ಥೆ ಮಾಡಿ ಕೇರಳಕ್ಕೆ ತೆರಳಲು ಹೊಸೂರು ಆರ್‌ಟಿಒ ಅಧಿಕಾರಿ ದೊರೆಸ್ವಾಮಿ ಮತ್ತು ಅಧಿಕಾರಿಗಳು ಸಹಕರಿಸಿದರು. ವಶಪಡಿಸಿಕೊಂಡ ಬಸ್ ಮಹಾರಾಷ್ಟ್ರ, ನಾಗಾಲ್ಯಾಂಡ್‌ನಲ್ಲಿ ನೋಂದಣಿಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net