

ರಾಣೆಬೆನ್ನೂರ: ಬಸ್ನಲ್ಲಿ ಮಹಿಳೆಯೊಬ್ಬರು ಸೀಟು ಹಿಡಿಯಲು ಎಂದು ಇಟ್ಟಿದ್ದ ಚಿನ್ನಾಭರಣವಿದ್ದ ಬ್ಯಾಗ್ಅನನು ಯಾರೋ ದೋಚಿದ ಘಟನೆ ನಗರದ ಬಸ್ ನಿಲ್ದಾಣದಲ್ಲಿ ಭಾನುವಾರ ನಡೆದಿದೆ.
ಬ್ಯಾಡಗಿ ತಾಲೂಕಿನ ಹೆಡಿಗೊಂಡ ಗ್ರಾಮದ ಶಿವಕ್ಕ ಸುಭಾಸ ದೊಡ್ಡಮನಿ ಎಂಬುವರ ಬ್ಯಾ ಗ್ ಕಳ್ಳತನ ಆಗಿರುವುದು.
ಇವರು ರಾಣೆಬೆನ್ನೂರಿನಿಂದ ದೇವರಗುಡ್ಡಕ್ಕೆ ಹೋಗುವ ಸಲುವಾಗಿ ಬಸ್ ಹತ್ತುವಾಗ ಸೀಟು ಹಿಡಿಯಲು ಎಂದು ಕಿಟಕಿಯಿಂದ ತಮ್ಮ ಬ್ಯಾಗ್ಅನ್ನು ಇಟ್ಟಿದ್ದರು. ಇವರು ಬಸ್ ಹತ್ತಿ ಬರುವುದರೊಳಗೆ ಯಾರೋ ಬ್ಯಾಗ್ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.