ಮುನ್ನೆಚ್ಚರಿಕೆ ಕ್ರಮವಾಗಿ ಬಸ್ ಸ್ಯಾನಿಟೈಸ್

15blrp2
Published on

ಬೇಲೂರು: ಪ್ರಯಾಣಿಕರಿಗೆ ಸೋಂಕು ಹರಡದಂತೆ ಖಾಲಿ ಬಸ್‌ಗೆ ಸೋಡಿಯಂ ಮಿಶ್ರಿತ ಕ್ರಿಮಿನಾಶಕ ಸಿಂಪಡಿಸುವ ಮೂಲಕ ಸ್ಯಾನಿಟೈಸ್ ಮಾಡಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ನಿಲ್ದಾಣದ ಟ್ರಾಫಿಕ್ ಕಂಟ್ರೋಲರ್ ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಬಸ್ ನಿಲ್ದಾಣದಲ್ಲಿ ಬುಧವಾರ ಬಸ್‌ಗಳಿಗೆ ಸ್ಯಾನಿಟೈಸ್ ಮಾಡಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಲ್ದಾಣಕ್ಕೆ ನಿತ್ಯ ಐನೂರಕ್ಕೂ ಹೆಚ್ಚು ಬಸ್‌ಗಳು ಬಂದು ಹೋಗುತ್ತವೆ. ಅದರಲ್ಲಿ ಬೇಲೂರು, ಸಕಲೇಶಪುರ, ಮೂಡಿಗೆರೆ ಹಾಗೂ ಚಿಕ್ಕಮಗಳೂರು ಡಿಪೋ ಬಸ್‌ಗಳಿಗೆ ಸಿಬ್ಬಂದಿ ಸ್ಯಾನಿಟೈಸ್ ಮಾಡುತ್ತಾರೆ ಎಂದರು.

ಟ್ರಾಫಿಕ್ ಕಂಟ್ರೋಲರ್ ಆನಂದಮೂರ್ತಿ, ಸಿಬ್ಬಂದಿ ಮಧುಲತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net