27ರಂದು ಬಸ್ ಸಂಚಾರ ತಾತ್ಕಾಲಿಕ ರದ್ದು

bussssssssssssss.png
Published on

 
ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ನಗರಕ್ಕೆ ಫೆ.27ರಂದು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ವಿಭಾಗದಿಂದ ಒಟ್ಟು 350 ವಾಹನಗಳನ್ನು ಪೂರೈಸಬೇಕಾಗಿದೆ. ಹಾಗಾಗಿ ವಿಭಾಗದ ಬೆಳಗಾವಿ, ಬೈಲಹೊಂಗಲ, ರಾಮದುರ್ಗ  ಖಾನಾಪೂರ ಬಸ್ ನಿಲ್ದಾಣಗಳಿಂದ ಕಾರ್ಯಾಚರಣಿಯಾಗುವ ಮಾರ್ಗಗಳ ಕೆಲವು ಸಾರಿಗೆಗಳ ಸಂಚಾರವನ್ನು  ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ.
ಬೆಳಗಾವಿಯಿಂದ- ಕೊಲ್ಲಾಪೂರ, ಹುಬ್ಬಳ್ಳಿ, ಧಾರವಾಡ, ಸನ್ನತಿ, ವಿಜಯಪೂರ, ಗುಡ್ಡಾಪುರ, ಬೀಡಿ, ತೋಲಗಿ, ನೇಸರಗಿ, (ದೇಶನೂರ) ಗೋಕಾಕ, ಹಿಡಕಲ್, ಪಾಶ್ಚಾಪೂರ, ಬೈಲಹೊಂಗಲ. ಸಿಬಿಟಿಯಿಂದ ನಗರ ಉಪನಗರ - ಅನಗೋಳ, ವಡಗಾವ ಮಜಗಾವ, ವಂಟಮೂರಿ, ಕಣಬರ್ಗಿ, ರಣಕುಂಡೆ, ಚಂದನ ಹೊಸರ, ಸುಳೆಭಾವಿ, ರಾಣಿಚೆನ್ನಮ್ಮ ವಿಶ್ವವಿದ್ಯಾಲಯ, ಹೊನಗಾ, ಯಳ್ಳೂರು, ಉಚಗಾವ. ಕಲ್ಲೆ ಹೋಳ, ಸುಳೇಬಾವಿ.
ಬೈಲಹೊಂಗಲದಿಂದ  ಬೆಳಗಾವಿ, ಧಾರವಾಡ, ಯರಗಟ್ಟಿ, ಮುನವಳ್ಳಿ, ನೇಸರಗಿ, ಬೆನಕಟ್ಟಿ, ಇಟಗಿರೋಡ, ಕಿತ್ತೂರು, ಹೊಳಿನಾಗಲಾಪೂರ, ಪಟ್ಟಿಹಾಳ, ಸವಟಗಿ, ಅಂಬಡಗಟ್ಟಿ, ಏಳಪಟ್ಟಿ, ತುರಮರಿ,ರಾಮದುರ್ಗದಿಂದ ಬೆಳಗಾವಿ, ಮೆಳ್ಳಿಕೇರಿ, ಹಿರೇಕೊಪ್ಪ, ಹೊಸೂರು, ಕೊಣ್ಣೂರು, ಮೂಲಂಗಿ, ಯಾದವಾಡ, ಅನವಾಲ, ಲಕ್ಕನಾಯಕನಕೊಪ್ಪ, ರೆಡ್ಡರತಿಮ್ಮಾಪೂರ, ಗೊಣಗನೂರು, ಗೊಡಚಿ, ಮುನವಳ್ಳಿ, ಯರಗಟ್ಟಿ, ಹುಲಕುಂದ, ಕುಳಗೇರಿ, ಕಮಕೇರಿ, ಕೆರೂರು. ಖಾನಾಪೂರದಿಂದ- ಬೆಳಗಾವಿ, ಇಟಗಿಕ್ರಾಸ್, ಬಿದರಬಾವಿ, ಚಿಕಲಾ, ಪಾರವಾಡ, ಘೋಡಗೇರಿ, ಚೀಡಿ, ಕಿತ್ತೂರು  ಸದರಿ ಮಾರ್ಗಗಳಲ್ಲಿ ಹೆಚ್ಚಿನ ಪ್ರಮಾಣದ ವಾಹನಗಳು ಇರುವುದರಿಂದ ಕೆಲವೊಂದು ವಾಹನಗಳನ್ನು ರದ್ದುಪಡಿಸಲಾಗಿದೆ.  ಪ್ರಯಾಣಿಕರು ಸಾರಿಗೆ ಸಂಸ್ಥೆಯೊಂದಿಗೆ ಸಹಕರಿಸಬೇಕು ಎಂದು ವಾಕರಸಾಸಂಸ್ಥೆ ಬೆಳಗಾವಿ ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net