ಬಸ್ ಕೊರತೆ ನಿವಾರಿಸಲು ಶಾಸಕರಿಗೆ ಮನವಿ

manavi
Published on

ಉಪ್ಪಿನಂಗಡಿ: ಬೆಳಗ್ಗಿನ ಹೊತ್ತು ಉಪ್ಪಿನಂಗಡಿಯಿಂದ ಪುತ್ತೂರಿಗೆ ತೆರಳಲು ಬಸ್ಸಿನ ಕೊರತೆಯಿದ್ದು, ವಿದ್ಯಾರ್ಥಿಗಳು ಅಪಾಯಕಾರಿಯಾಗಿ ನೇತಾಡಿಕೊಂಡು ಪ್ರಯಾಣಿಸಬೇಕಾಗಿದೆ. ಆದ್ದರಿಂದ ಈ ಸಮಯದಲ್ಲಿ ಪುತ್ತೂರಿಗೆ ಹೆಚ್ಚುವರಿ ಬಸ್‌ನ ವ್ಯವಸ್ಥೆಯನ್ನು ವಾಡಬೇಕೆಂದು ಉಪ್ಪಿನಂಗಡಿ ಪರಿಸರದ ಪುತ್ತೂರು ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿಗಳು ಶಾಸಕ ಅಶೋಕ್ ಕುವಾರ್ ರೈ ಅವರಿಗೆ ಮನವಿ ಮಾಡಿದ್ದಾರೆ.

ಬೆಳಗ್ಗೆ 8 ಗಂಟೆಗೆ ವಿದ್ಯಾರ್ಥಿಗಳು ಹಾಗೂ ಉದ್ಯೋಗಕ್ಕೆ ತೆರಳುವವರು ಏಕಕಾಲಕ್ಕೆ ಪುತ್ತೂರಿಗೆ ತೆರಳುವುದರಿಂದ ಈ ಸಮಯದಲ್ಲಿ ಬಸ್ಸಿನಲ್ಲಿ ಪ್ರತಿ ಬಾರಿಯೂ ನೂಕುನುಗ್ಗಲು ಉಂಟಾಗುತ್ತದೆ. ಹಲವು ವಿದ್ಯಾರ್ಥಿಗಳು ಬಸ್ಸಿನೊಳಗೆ ತುಂಬಿರುವ ಜನಸಂದಣಿಯಿಂದ ಬಸ್ ಹತ್ತಲಾಗದೆ ಸರಿಯಾದ ಸಮಯಕ್ಕೆ ಶಾಲೆ-ಕಾಲೇಜುಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಕಾಲೇಜು ತಲುಪುವ ಅನಿವಾರ್ಯತೆಯಿಂದಾಗಿ ವಿದ್ಯಾರ್ಥಿಗಳು ನೇತಾಡಿಕೊಂಡು ಪ್ರಯಾಣಿಸುವ ದುಃಸ್ಥಿತಿ ನಿರ್ವಾಣವಾಗಿದೆ. ಆದ್ದರಿಂದ ಈ ಸಮಯದಲ್ಲಿ ಉಪ್ಪಿನಂಗಡಿಯಿಂದ ಪುತ್ತೂರಿಗೆ ತೆರಳಲು ಹೆಚ್ಚುವರಿ ಕೆಎಸ್ಸಾರ್ಟಿಸಿ ಬಸ್‌ನ ಸೌಲಭ್ಯ ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಮನವಿ ನೀಡಿದ ನಿಯೋಗದಲ್ಲಿ ವಿದ್ಯಾರ್ಥಿಗಳಾದ ಫಾರಿಶ್ ಬಸ್ತಿಕ್ಕಾರ್, ಮುನೀಶ್, ಫಿದಾ, ಅಕ್ಷಯ, ರಾಹುಲ್, ಜಾನ್, ಧನುಶ್ರೀ, ಸಮೀರ್, ವಿಸ್ಡನ್, ರಾವ್ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net