ಬಸ್ ನಿಲ್ಲಿಸದೆ ಪರದಾಟ

01 Hg Photo
Published on

ಹಗರೆ: ಶಕ್ತಿ ಯೋಜನೆ ಜಾರಿಯಾದಾಗಿನಿಂದ ದಿನದಿಂದ ದಿನಕ್ಕೆ ಮಹಿಳೆಯರ ಬಸ್ ಸಂಚಾರ ಹೆಚ್ಚಾಗಿದೆ. ಪರಿಣಾಮ ಎಲ್ಲ ಬಸ್‌ಗಳೂ ರಷ್. ಪ್ರತಿದಿನ ಶಾಲಾ ಕಾಲೇಜುಗಳಿಗೆ ಸಂಚರಿಸುವ ವಿದ್ಯಾರ್ಥಿಗಳು ಮತ್ತು ನೌಕರರ ಪರಿಸ್ಥಿತಿ ಹೇಳತೀರದಾಗಿದೆ. ಹಗರೆ ಬಸ್ ನಿಲ್ದಾಣದಲ್ಲಿ ನಿತ್ಯವೂ ಬಸ್‌ಗೆ ಕಾಯುವುದೇ ದೊಡ್ಡ ಸಮಸ್ಯೆಯಾಗಿದೆ.
ರಾಜ್ಯ ಹೆದ್ದಾರಿ ಬೇಲೂರು- ಹಾಸನದ ಮಧ್ಯೆ ಇರುವ ಹಗರೆ ಬಸ್ ನಿಲ್ದಾಣದಲ್ಲಿ ಬೆಳಗ್ಗೆ 7ರಿಂದ 10ರ ವರೆಗೆ ನೂರಾರು ವಿದ್ಯಾರ್ಥಿಗಳು ಸಾರಿಗೆ ಬಸ್‌ಗಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಗರೆ ಸುತ್ತಮುತ್ತಲ ಗ್ರಾಮಗಳಾದ ಹುಲುಗುಂಡಿ, ಆಂದಲೆ, ಗೊರೂರು, ದೇವಿಹಳ್ಳಿ, ಮಲ್ಲಾಪುರ, ಬಸವಾಪುರ, ಬಂಟೇನಹಳ್ಳಿ, ಸವಾಸಿಹಳ್ಳಿ ಸೇರಿದಂತೆ ಸುಮಾರು 10 ಕಿ.ಮೀ. ದೂರದ ಊರುಗಳಿಂದ ಹಗರೆಗೆ ಆಟೋರಿಕ್ಷಾ, ಟೆಂಪೋ, ಬೈಕ್‌ನಲ್ಲಿ ಬರುವ ವಿದ್ಯಾರ್ಥಿಗಳು ಮತ್ತು ನೌಕರರು ಹಾಸನಕ್ಕೆ ತೆರಳಲು ಬಸ್ ಅವಲಂಬಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net