ಬಸ್ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ, ಸಂಪೂರ್ಣ ವಿಳಾಸ, ಟೆಸ್ಟ್ ಬಳಿಕ ಪ್ರಯಾಣಕ್ಕೆ ಅವಕಾಶ

250520 Kampli Bus Stand Thermal Screening
Published on

ಕಂಪ್ಲಿ: ಪಟ್ಟಣದ ಬಸ್ ನಿಲ್ದಾಣದಲ್ಲಿ ಬೇರೆ ಊರಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿದೆ. ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ಮೂಲಕ ಟೆಸ್ಟ್ ಹಾಗೂ ಸಂಪೂರ್ಣ ಮಾಹಿತಿ ಪಡೆದ ಬಳಿಕ ಬಸ್ ಹತ್ತಲು ಅವಕಾಶ ನೀಡಲಾಗುತ್ತಿದೆ.

ಮೇ 19ರಂದು ಬಸ್ ಸಂಚಾರ ಆರಂಭಿಸಲಾಗಿತ್ತು. ಮೊದಲ ದಿನ ನಿಲ್ದಾಣದತ್ತ ಯಾರೂ ಸುಳಿಯಲಿಲ್ಲ.ಮರುದಿನದಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಮೇ 20ರಂದು 60 ಜನ, 21 ರಂದು 92, 22ಕ್ಕೆ 79, 23ರಂದು 117 ಹಾಗೂ 25ರಂದು 90ಕ್ಕೂ ಅಧಿಕ ಪ್ರಯಾಣಿಕರು ಗಂಗಾವತಿ, ಹೊಸಪೇಟೆ, ಬಳ್ಳಾರಿ ಕಡೆಗೆ ಪ್ರಯಾಣಿಸಿದ್ದಾರೆ. ಕುರುಗೋಡು, ಸಿರಗುಪ್ಪ ಕಡೆಗೆ ಹೋಗುವವರ ಸಂಖ್ಯೆ ವಿರಳವಾಗಿದೆ.

ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಬಸ್ ವ್ಯವಸ್ಥೆ ಕಲ್ಪಿಸಿದ್ದು, ನಿಲ್ದಾಣದಲ್ಲಿ ಸರದಿಯಲ್ಲಿ ಬಂದು ಹೋಗಲು ವ್ಯವಸ್ಥೆ ಮಾಡಲಾಗಿದೆ. ದೈಹಿಕ ಅಂತರ ಕಾಪಾಡಿಕೊಳ್ಳಲು ಸೂಚನೆ ನೀಡಲಾಗುತ್ತಿದೆ. ಅಲ್ಲದೆ ಸೂಚನಾ ಫಲಕಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಬಸ್ ಹತ್ತುವಾಗ ಅಂತರ ಕಾಪಾಡಿಕೊಳ್ಳಲು ಸರದಿಯಲ್ಲಿ ನಿಲ್ಲಲು ವೃತ್ತಗಳನ್ನು ಹಾಕಲಾಗಿದೆ. ನಿಲ್ದಾಣದ ಒಂದೇ ದ್ವಾರದ ಮೂಲಕ ಬಸ್‌ಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net