ಬಸ್ ಉದ್ಯಮಿ ಪ್ರಕಾಶ್ ಶೇಖಗೆ ಕಣ್ಣೀರ ವಿದಾಯ

mng--1 Oct prakasha sheka
Published on

ಮಂಗಳೂರು: ಕದ್ರಿ ಅಪಾರ್ಟ್‌ಮೆಂಟ್‌ನಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡ ಮಹೇಶ್ ಮೋಟಾರ್ಸ್‌ ಮಾಲೀಕ, ಉದ್ಯಮಿ ಪ್ರಕಾಶ್ ಶೇಖ (42) ಅವರ ಅಂತ್ಯಕ್ರಿಯೆ ಸೋಮವಾರ ಸಂಜೆ ಶಕ್ತಿನಗರ ಸ್ಮಶಾನದಲ್ಲಿ ನಡೆಯಿತು.


ನಗರದ ಖಾಸಗಿ ಆಸ್ಪತ್ರೆಯ ಶವಾಗಾರಾದಲ್ಲಿರಿಸಲಾಗಿದ್ದ ಮೃತದೇಹವನ್ನು ಸೋಮವಾರ ಬೆಳಗ್ಗೆ 9ಗಂಟೆಗೆ ಪಾರ್ಥಿವ ಶರೀರದ ಮೆರವಣಿಗೆಯನ್ನು ಕುಲಶೇಖರದಲ್ಲಿರುವ ಅವರ ಮೂಲ ಮನೆಗೆ ಕೊಂಡೊಯ್ಯಲಾಯಿತು. ಅಲ್ಲಿ ಕುಟುಂಬ ಸದಸ್ಯರು, ಬಂಧುಗಳು ಅಂತಿಮ ದರ್ಶನ ಪಡೆದ ಬಳಿಕ ವಿಧಿವಿಧಾನ ನೆರವೇರಿಸಿ ಮಧ್ಯಾಹ್ನ 2ಗಂಟೆಗೆ ಶಕ್ತಿನಗರದ ಸ್ಮಶಾನಕ್ಕೆ ಕೊಂಡೊಯ್ಯಲಾಯಿತು. ಸಂಜೆ 3ಗಂಟೆ ವೇಳೆಗೆ ಅಂತಿಮ ಸಂಸ್ಕಾರ ನಡೆದಿದ್ದು, ಈ ವೇಳೆ ನೂರಾರು ಮಂದಿ ಸಾಕ್ಷಿಯಾಗಿದ್ದರು.


ಮನಕಲಕುವ ದೃಶ್ಯ: ಬಸ್ ಉದ್ಯಮಿಯ ಮೃತದೇಹ ಅಲಂಕಾರಗೊಂಡ ವಾಹನದಲ್ಲಿ ಸಾಗಿದರೆ, ಹಿಂದಿನಿಂದ ಸಾಲು ಸಾಲು ಕಾರು, ಖಾಸಗಿ ವಾಹನಗಳು ಸಾಗಿದವು. ಇದಾದ ಬಳಿಕ ಅವರ ಮಾಲೀಕತ್ವದ 32 ಖಾಲಿ ಬಸ್‌ಗಳು ಸಾಗುತ್ತಿರುವ ದೃಶ್ಯ ಮನಕಲಕುತ್ತಿತ್ತು.
ಸಾವಿನ ಕಾರಣ ಇನ್ನೂ ನಿಗೂಢ: ಪ್ರಕಾಶ್ ಅವರ ಆತ್ಮಹತ್ಯೆ ನಿಖರ ಕಾರಣವೇನೆಂದು ಇನ್ನೂ ಪೊಲೀಸರಿಗೆ ತಿಳಿದು ಬಂದಿಲ್ಲ. ಕದ್ರಿ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net