ಬಸ್ ಪಲ್ಟಿಯಾಗಿ ಮಹಿಳೆ ಸಾವು

Harapanahalli Accident
ಸತ್ತೂರು ಗ್ರಾಮದ ಕೆರೆ ಬಳಿ ಸಾರಿಗೆ ಬಸ್ ಕಂದಕಕ್ಕೆ ಉರುಳಿರುವುದು.
Published on

ಹರಪನಹಳ್ಳಿ: ತಾಲೂಕಿನ ಸತ್ತೂರು ಗ್ರಾಮದ ಕೆರೆ ಬಳಿ ಗುರುವಾರ ಸಾರಿಗೆ ಬಸ್ ಪಲ್ಟಿಯಾಗಿ ಮಹಿಳೆ ಮೃತಪಟ್ಟಿದ್ದು, 15 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸತ್ತೂರು ಗ್ರಾಮದಿಂದ ಬಸ್ ಹತ್ತಿದ್ದ ಕರಿಬಸಪ್ಪನವರ ಹನುಮಕ್ಕ (40) ಮೃತೆ. ದಾವಣಗೆರೆಯಿಂದ ಹರಪನಹಳ್ಳಿಗೆ ಚಲಿಸುತ್ತಿದ್ದ ಬಸ್, ಸತ್ತೂರು ಕೆರೆಯ ಎಡಬದಿ ಕಂದಕಕ್ಕೆ ಉರುಳಿದೆ. 15 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು, ಪೊಲೀಸರು ರಕ್ಷಿಸಿ ದಾವಣಗೆರೆ ಜಿಲ್ಲೆ ಚಿಗಟೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಗೆ ಚಾಲಕನ ನಿರ್ಲಕ್ಷೃವೇ ಕಾರಣ ಎನ್ನಲಾಗಿದೆ.

ಸಿಪಿಐ ನಾಗರಾಜ್ ಕಮ್ಮಾರ್, ಅರಸೀಕೆರೆ ಪಿಎಸ್‌ಐ ಕೆ.ರಂಗಯ್ಯ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net