

ಜಯಪುರ: ಗುಡ್ಡೇತೋಟ ಮೇಲಿನ ಸೈಟ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಮಗುಚಿ ಬಿದ್ದು 15 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಮೈಸೂರು ಜಿಲ್ಲೆ ಟಿ.ನರಸೀಪುರದ 34 ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿದ್ದ ಬಸ್ ಶೃಂಗೇರಿ ಕಡೆಯಿಂದ ಜಯಪುರ ಮಾರ್ಗವಾಗಿ ಹೊರನಾಡಿಗೆ ಸಂಚರಿಸುತ್ತಿತ್ತು. ಗುಡ್ಡೇತೋಟ ಬಳಿ ಅತಿವೇಗ ಹಾಗೂ ಅಜಾಗರೂಕ ಚಾಲನೆಯಿಂದಾಗಿ ತಿರುವಿನಲ್ಲಿ ಬಸ್ ಮಗುಚಿ ಬಿದ್ದಿದೆ. ಬಸ್‌ನ ಗಾಜುಗಳು ಪುಡಿ ಪುಡಿಯಾಗಿವೆ. ಗಾಯಗೊಂಡವರನ್ನು ಶೃಂಗೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಯಪುರ ಪಿಎಸ್‌ಐ ಅಂಬರೀಶ್ ಸ್ಥಳಕ್ಕೆ ಭೇಟಿ ನೀಡಿದ್ದರು.