ಬಸ್ ಹರಿದು ಇಬ್ಬರ ಸಾವು

17-1
Published on

ಓವರ್‌ಟೆಕ್ ಮಾಡುವ ವೇಳೆ ಬೈಕ್ ನಿಯಂತ್ರಣ ತಪ್ಪಿ ಅವಘಡ

ದೊಡ್ಡಬಳ್ಳಾಪುರ: ತಾಲೂಕಿನ ಗೊಲ್ಲಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ಗುರುವಾರ ದ್ವಿಚಕ್ರ ವಾಹನ ಸವಾರರ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಹರಿದ ಪರಿಣಾಮ 8 ವರ್ಷದ ಮಗು ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಕೆಳಗಿನಜೋಗನಹಳ್ಳಿ ನಿವಾಸಿ ವೆಂಕಟೇಶ ಮೂರ್ತಿ(25), ಆತನ ಸಹೋದರಿ ಪುತ್ರಿ ಮೋಕ್ಷಿತಾ (8) ಮೃತರು.

ಆಗಿದ್ದು ಏನು?: ಇಬ್ಬರು ಮಕ್ಕಳು ಹಾಗೂ ಮಹಿಳೆಯೊಬ್ಬರ ಜತೆ ವೆಂಕಟೇಶ ಮೂರ್ತಿ ದ್ವಿಚಕ್ರ ವಾಹನದಲ್ಲಿ ಕೆಳಗಿನ ಜೂಗಾನಹಳ್ಳಿಯಿಂದ ದೊಡ್ಡಬಳ್ಳಾಪುರಕ್ಕೆ ತೆರಳುತ್ತಿದ್ದರು. ಈ ವೇಳೆ ಆಂಧ್ರ ಪ್ರದೇಶದ ಸಾರಿಗೆ ಬಸ್ ಓವರ್ ಟೇಕ್ ಮಾಡಲು ಮುಂದಾಗಿದ್ದು, ಈ ವೇಳೆ ಬಸ್‌ಗೆ ದ್ವಿಚಕ್ರವಾಹನದ ಹ್ಯಾಂಡಲ್ ತಗುಲಿದೆ. ಇದರಿಂದ ಬೈಕ್ ನಿಯಂತ್ರಣ ತಪ್ಪಿದ್ದು, ವೆಂಕಟೇಶ್ ಮೂರ್ತಿ ಹಾಗೂ ದ್ವಿಚಕ್ರ ವಾಹನದಲ್ಲಿದ್ದವರು ಬಿದ್ದಿದ್ದಾರೆ. ಇದೇ ಸಮಯಕ್ಕೆ ಹಿಂದಿನಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ವೆಂಕಟೇಶ್ ಮೂರ್ತಿ ಹಾಗೂ ಮಗು ಮೋಕ್ಷಿತಾ ಮೇಲೆ ಹರಿದಿದೆ. ವೆಂಕಟೇಶ್ ಮೂರ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೋಕ್ಷಿತಾ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಕೊನೆಯು ಸಿರೆಳೆದಿದ್ದಾರೆ. ಮಹಿಳೆ ಹಾಗೂ ಮತ್ತೊಂದು ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net