Bus ಪಲ್ಟಿ 3 ಜನರಿಗೆ ಗಾಯ

Bus
Published on

ಸಿದ್ದಾಪುರ: ಚಂದ್ರಗುತ್ತಿಯಿಂದ ಸಿದ್ದಾಪುರ ಕಡೆಗೆ ಬರುತಿದ್ದ ಸಾರಿ(Bus)ಗೆ ಬಸ್ ಬಳ್ಳಟ್ಟೆ ಕ್ರಾಸ್ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಬಿದ್ದಿದ್ದು ಚಾಲಕ ಸಹಿತ ಮೂವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾದ ಘಟನೆ ಗುರುವಾರ ಸಂಭವಿಸಿದೆ.

ಎಕ್ಸೆಲ್‌ ತುಂಡಾಗಿ ಬಸ್‌ ಚಾಲಕನ ನಿಯಂತ್ರಣ ತಪ್ಪಿತ್ತು ಎನ್ನಲಾಗಿದೆ. ಗಾಯಾಳುಗಳಿಗೆ ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net