ಬಸ್ ಸಂಚಾರ ಹೆಚ್ಚು ಸುರಕ್ಷಿತ

CTD BUS
Published on

ಚಿತ್ರದುರ್ಗ: ತಾಲೂಕು ಹುಣಸೇಕಟ್ಟೆ ಗೊಲ್ಲರಹಟ್ಟಿಯಿಂದ ನಾನಾ ಗ್ರಾಮಗಳ ಮೂಲಕ ಚಿತ್ರದುರ್ಗ ನಗರಕ್ಕೆ ಸಂಚರಿಸಲಿರುವ ಕೆಎಸ್‌ಆರ್‌ಟಿಸಿ ಬಸ್ಸಿಗೆ ಶುಕ್ರವಾರ ಹುಣಸೇಕಟ್ಟೆಯಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಚಾಲನೆ ನೀಡಿದರು.

ಹುಣಸೇಕಟ್ಟೆ ಗೊಲ್ಲರಹಟ್ಟಿ,ವಡ್ಡರ ಸಿದ್ದವ್ವನಹಳ್ಳಿ,ಕೊಡಗವಳ್ಳಿ,ಕ್ಯಾಸಾಪುರ,ಸೀಬಾರ ಗ್ರಾಮಗಳಲ್ಲಿ ಬಸ್ ಸಂಚರಿಸಲಿದ್ದು,ರೈತರಿಗೆ, ವಿದ್ಯಾರ್ಥಿಗಳಿಗೆ, ವರ್ತಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ದ್ವಿಚಕ್ರ ಮತ್ತಿತರ ವಾಹನಗಳಿದ್ದರೂ ಬಸ್ಸಿನ ಪ್ರಯಾಣ ಹೆಚ್ಚು ಸುರಕ್ಷಿತವೆಂದು ಗ್ರಾಮಸ್ಥರಿಗೆ ಸಲಹೆ ನೀಡಿದರು.

ಮುಖಂಡರಾದ ಮಲ್ಲಿ ಕಾರ್ಜುನ,ಬಾಬು,ರಘು,ಶ್ರೀನಿವಾಸ್,ಆನಂದ್,ನಿಂಗಪ್ಪ,ಗುರುಲಿಂಗಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net