30ಕ್ಕೂ ಅಧಿಕ ಜನರಿದ್ದ ಮದುವೆ ದಿಬ್ಬಣದ ಬಸ್​ ಪಲ್ಟಿ; ಕಂದಕಕ್ಕೆ ಉರುಳಿದ ವಾಹನ, ಇನ್ನೂ ಮೂವರು ಅಡಿಗೆ ಸಿಲುಕಿರುವ ಶಂಕೆ..

Accident
Published on

ಕಲಬುರಗಿ: ಮದುವೆ ದಿಬ್ಬಣದ ಮೂವತ್ತಕ್ಕೂ ಅಧಿಕ ಜನರಿದ್ದ ಬಸ್ಸೊಂದು ಪಲ್ಟಿಯಾಗಿ ಕಂದಕಕ್ಕೆ ಉರುಳಿದ ದುರಂತ ಸಂಭವಿಸಿದೆ. ಕಲಬುರಗಿ ಜಿಲ್ಲೆಯಲ್ಲಿ ಇಂಥದ್ದೊಂದು ಭೀಕರ ಅಪಘಾತ ಸಂಭವಿಸಿದೆ.

ಕಲಬುರಗಿಯ ಕಡಣಿ ಗ್ರಾಮದ ಬಳಿ ಈ ಅಪಘಾತ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದಾಚೆಗೆ ಸರಿದ ಬಸ್ ಪಲ್ಟಿಯಾಗಿ ಕಂದಕಕ್ಕೆ ಉರುಳಿದೆ. ಬಸ್​ನಲ್ಲಿ ಮಹಿಳೆಯರು ಮಕ್ಕಳು ಸೇರಿ 30ಕ್ಕೂ ಅಧಿಕ ಮಂದಿ ಹಾಜರಿದ್ದರು.

ಕೂಡಲೇ ಗ್ರಾಮಸ್ಥರು ಸಹಾಯಕ್ಕೆ ಧುಮುಕಿದ್ದು, ಜೆಸಿಬಿ ಯಂತ್ರದ ಮೂಲಕ ಪಲ್ಟಿಯಾಗಿರುವ ಬಸ್​ ಮೇಲೆತ್ತಲು ಪ್ರಯತ್ನಿಸಲಾಗಿದೆ. ಅದಾಗ್ಯೂ ಇನ್ನೂ ಮೂವರು ಬಸ್​ನಡಿಗೆ ಸಿಲುಕಿರುವ ಶಂಕೆ ಇದೆ. ಕಲಬುರಗಿಯಲ್ಲಿ ಮದುವೆ ಮುಗಿಸಿಕೊಂಡವರು ಈ ಬಸ್​ನಲ್ಲಿ ಹಾವನೂರು ಕಡೆಗೆ ಹೋಗುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net