

ಸವಣೂರ: ಪಟ್ಟಣದ ವಾಯವ್ಯ ಕರ್ನಾಟಕ ಸಾರಿಗೆ ಬಸ್ ಘಟಕಕ್ಕೆ ನೀಡಿದ ಎರಡು ಬಸ್ಗಳ ಪೈಕಿ ಒಂದು ಬಸ್ ಅನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸುಭಾಸ ಮಜ್ಜಗಿ ಮಂಗಳವಾರ ಲೋಕಾರ್ಪಣೆಗೊಳಿಸಿದರು.
ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನೂತನ ಬಸ್ಗೆ ಪೂಜೆ ಸಲ್ಲಿಸಿ, ಸಾರ್ವಜನಿಕ ಸಂಚಾರಕ್ಕೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಸರ್ಕಾರ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಶಕ್ತಿ ಯೋಜನೆಯ ಹಿನ್ನೆಲೆಯಲ್ಲಿ ಸ್ಥಳೀಯ ಬಸ್ ಘಟಕಕ್ಕೆ ಅವಶ್ಯವಿದ್ದ ಬಸ್ಗಳನ್ನು ಹಂತ ಹಂತವಾಗಿ ನೀಡುವ ಭರವಸೆ ನೀಡಿದ್ದು, ಈ ಹಿಂದೆ 4 ಬಸ್ಗಳನ್ನು ಸವಣೂರ ಘಟಕಕ್ಕೆ ನೀಡಲಾಗಿತ್ತು. ಇದೀಗ ಮತ್ತೆ ಎರಡು ಬಸ್ಗಳನ್ನು ನೀಡಲಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ ಮುಲ್ಲಾ, ತಾಲೂಕು ಪ್ರದೇಶ ಕುರುಬ ಸಂಘದ ಅಧ್ಯಕ್ಷ ರವಿ ಕರಿಗಾರ, ಗ್ಯಾರಂಟಿ ಸಮಿತಿ ಸದಸ್ಯರಾದ ನಾಗಪ್ಪ ತಿಮ್ಮಾಪುರ, ಹನಮಂತ ಹಳ್ಳಿ, ಪರಶುರಾಮ ಜುಂಜಣ್ಣವರ, ಇಬ್ರಾಹಿಂ ಕರ್ಜಗಿ, ಮುತ್ತಣ್ಣ ಗೌಡಗೇರಿ, ಶಂಕರ ಗೊಡ್ಡೆಮ್ಮಿ ಹಾಗೂ ಇತರರು ಇದ್ದರು.